ಕ್ರಿಕೆಟ್ ನಲ್ಲಿ ಮುಸ್ಲಿಮರನ್ನು ತುಂಬಿಸಲು ಟೀಮ್ ಇಂಡಿಯಾ, ಬಿಜೆಪಿಯ MRM ಅಲ್ಲ ಮೋದಿ ಅರಿಯಲಿ: ಕೆ.ಅಶ್ರಫ್

Prasthutha|

ಮಂಗಳೂರು: ಭಾರತದ ಕ್ರಿಕೆಟ್ ತಂಡಕ್ಕೆ ಅದರದ್ದೇ ಆದ ಘನತೆ ಗೌರವ ಇದೆ. ಆಟಗಾರರ ಆಯ್ಕೆಗೆ ಅದರದ್ದೇ ಆದ ಮಾನದಂಡ ಇದೆ. ನರೇಂದ್ರ ಮೋದಿರವರ ಹೇಳಿಕೆಯ ಹಾಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತದ ಕ್ರಿಕೆಟ್ ತಂಡದಲ್ಲಿ ಮುಸ್ಲಿಮ್ ಕ್ರೀಡಾಳುಗಳನ್ನೇ ನೇಮಿಸಲಾಗುತ್ತದೆ ಎಂಬ ಪ್ರಧಾನಿಯವರು ಬಾಲಿಶ ಹೇಳಿಕೆ ನೀಡುವುದಾದರೆ, ಮೋದಿಯವರು ಅರಿಯಲಿ, ಟೀಮ್ ಇಂಡಿಯಾ ಬಿಜೆಪಿಯ ಎಮ್.ಆರ್. ಎಮ್ ಅಲ್ಲ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಭಾರತದ ಕ್ರಿಕೆಟ್ ತಂಡದಲ್ಲಿ ಮುಸ್ಲಿಮ್ ಕ್ರೀಡಾಳುಗಳ ಸಹಿತ ಪ್ರತಿಭಾವಂತ ಅರ್ಹ ಇತರರು ಇರಲಿದ್ದಾರೆ. ಮತ್ತು ಅದು ಈ ದೇಶದ ಸಂವಿಧಾನದ ಸೌಂದರ್ಯ ಕೂಡಾ ಹೌದು. ಭಾರತದ ಭವಿಷ್ಯವು ಈ ನೆಲದ ಮಣ್ಣಿನಲ್ಲಿ ಹುಟ್ಟಿ ಬೆಳೆದ ಸರ್ವರಲ್ಲಿ ಇದೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರಲ್ಲಿ, ಈ ದೇಶಕ್ಕೆ ಸಂಪತ್ತಿನ ಕೊಡುಗೆ ನೀಡಿದವರಲ್ಲಿ, ಈ ದೇಶಕ್ಕೆ ಅಪ್ರತಿಮ ಸ್ಮಾರಕವನ್ನು ನೀಡಿದವರಲ್ಲಿ, ಈ ದೇಶಕ್ಕೆ ಉತ್ತಮ ಆಡಳಿತ ನೀಡದವರಲ್ಲಿ, ಮುಸ್ಲಿಮರು ಮುಂಚೂಣಿಯಲ್ಲಿ ಇದ್ದಾರೆ, ಭವಿಷ್ಯದಲ್ಲಿ ಈ ದೇಶದ ಸ್ವಾಭಿಮಾನ , ಗೌರವ,ರಕ್ಷಣೆಗೆ ಮುಸ್ಲಿಮರು ಎಂದಿಗೂ ಸಿದ್ದ ಮತ್ತು ಈ ನಿಟ್ಟಿನಲ್ಲಿ ಹತ್ತುಹೆಜ್ಜೆ ( ದಸ್ ಕದಂ ಆಗೇ) ಮುಂದೆಯೇ ಇರುತ್ತಾರೆ, ಈ ದೇಶದ ಪ್ರತಿ ಮುಸ್ಲಿಮ್ ಕ್ರೀಡಾಳು, ವ್ಯಕ್ತಿ, ಭಾರತ ದೇಶದ ಘನತೆ, ಗೌರವ,ಕೀರ್ತಿ ಮತ್ತು ಯಶಸ್ವಿಗಾಗಿ ಸ್ಪರ್ಧಿಸುತ್ತಾರೆಯೇ ಹೊರತು ಅವರವರ ಹೆಸರು, ಧರ್ಮ, ಕುಟುಂಬದ ಕೀರ್ತಿಗಾಗಿ ಅಲ್ಲ,ಎಂದು ಮೋದಿಯವರು ಅರಿಯಲಿ ಎಂದರು.

ಅಧಿಕಾರಕ್ಕಾಗಿ ಜನಾಂಗ ದ್ವೇಷ ಸಾಧಿಸಿದ ಯಾವುದೇ ಆಡಳಿತಗಾರರು ಯಶಸ್ವಿಯಾಗಿಲ್ಲ, ಚರಿತ್ರೆಯೇ ನಮ್ಮ ಮುಂದಿದೆ. ಇಂತಹ ದ್ವೇಷ ಪೂರಿತ ಹೇಳಿಕೆಗಳು ಭಾರತದ ಹಿಂದಿನ ಯಾವುದೇ ಪ್ರಧಾನಿಯಿಂದ ಬಂದಿಲ್ಲ ಮತ್ತು ಈ ಹುದ್ದೆಗೆ ಶೋಭೆ ತರುವಂತದ್ದಲ್ಲ. ದೇಶದ ಸರ್ವಾಂಗೀಣ ಅಭಿವೃದ್ಧಿಯ ಮಾತೆತ್ತದ ಏಕೈಕ ಪ್ರಧಾನಿ ಮೋದಿ ಆಗಿದ್ದಾರೆ. ಇಂತಹ ವ್ಯಕ್ತಿಗಳ ನಿರ್ಗಮನ ಸನ್ನಿಹಿತ ಎಂದರು.

Join Whatsapp