ದೇಶದಲ್ಲಿ 2 ವರ್ಷಗಳ ಅವಧಿಯಲ್ಲಿ 4484 ಪೊಲೀಸ್ ಕಸ್ಟಡಿ ಸಾವು, 233 ಎನ್ಕೌಂಟರ್: ಅಂಕಿಅಂಶಗಳೊಂದಿಗೆ ಬಹಿರಂಗ

Prasthutha|

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಒಟ್ಟು 4,484 ಮಂದಿ ಪೊಲೀಸ್ ಕಸ್ಟಡಿಯಲ್ಲಿ ಮತ್ತು 233 ಮಂದಿ ಎನ್ಕೌಂಟರ್’ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಅಂಕಿಅಂಶಗಳೊಂದಿಗೆ ಲೋಕಸಭೆಗೆ ಮಾಹಿತಿ ನೀಡಿದೆ.

- Advertisement -

ಈ ಪೈಕಿ ಉತ್ತರ ಪ್ರದೇಶವು ಗರಿಷ್ಠ ಸಂಖ್ಯೆಯ ಪೊಲೀಸ್ ಕಸ್ಟಡಿ ಸಾವುಗಳನ್ನು ದಾಖಲಿಸಿದ ರಾಜ್ಯವೆಂಬ ಕುಖ್ಯಾತಿಗೆ ಪಾತ್ರವಾಗಿದೆ. ಎನ್ಕೌಂಟರ್’ನಲ್ಲಿ ಜಮ್ಮು ಮತ್ತು ಕಾಶ್ಮೀರವು ಮುಂದಿದೆ.

ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಸಂಸದ ಅಬ್ದುಸ್ಸಮದ್ ಸಮದಾನಿ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ವ್ಯವಹಾರಗಳ ಸಚಿವಾಲಯವು ಏಪ್ರಿಲ್ 1, 2020 ರಿಂದ ಮಾರ್ಚ್ 31, 2022 ರವರೆಗೆ ಕಸ್ಟಡಿ ಸಾವುಗಳು ಮತ್ತು ಎನ್ಕೌಂಟರ್ ಹತ್ಯೆಗಳ ಕುರಿತು ದಾಖಲಾಗಿರುವ ಪ್ರಕರಣ ಸಂಖ್ಯೆಗಳ ವಾರ್ಷಿಕವಾರು ಮತ್ತು ರಾಜ್ಯವಾರು ವಿವರಗಳನ್ನು ನೀಡಿದೆ.

- Advertisement -

2020 – 21 ರಲ್ಲಿ 1940 ಪೊಲೀಸ ಕಸ್ಟಡಿ ಸಾವು ಪ್ರಕರಣ ದಾಖಲಾಗಿದ್ದರೆ, 2021 – 2022 ರಲ್ಲಿ 2544 ಪ್ರಕರಣಗಳು ದಾಖಲಿಸಲಾಗಿದೆ ಎಂದು ಅಂಕಿ ಅಂಶಗಳು ಬಹಿರಂಗಪಡಿಸಿದೆ.

2020 – 21 ರಲ್ಲಿ ಬಿಜೆಪಿ ಆಳುವ ಉತ್ತರ ಪ್ರದೇಶದಲ್ಲಿ 451 ಮಂದಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದರೆ, ಟಿಎಂಸಿ ಆಡಳಿತರ ಪಶ್ಚಿಮ ಬಂಗಾಳದಲ್ಲಿ 185 ಮತ್ತು ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶದಲ್ಲಿ 163 ಮಂದಿ ಸಾವನ್ನಪ್ಪಿದ್ದಾರೆ.

2021 – 22 ರಲ್ಲಿ ಉತ್ತರ ಪ್ರದೇಶದಲ್ಲಿ 501 ಕಸ್ಟಡಿ ಸಾವುಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳನ್ನು ಪಶ್ಚಿಮ ಬಂಗಾಳ 257 ಮತ್ತು ಮಧ್ಯಪ್ರದೇಶ 201 ಸಂಪಾದಿಸಿವೆ.

ಬಿಹಾರ ಎರಡು ವರ್ಷಗಳಲ್ಲಿ 396 ಪ್ರಕರಣಗಳೊಂದಿಗೆ ಮೂರನೇ ಅತೀ ಹೆಚ್ಚಿ ಕಸ್ಟಡಿ ಸಾವುಗಳನ್ನು ವರದಿ ಮಾಡಿದೆ ( 2020 ರಲ್ಲಿ 159 ಮತ್ತು 2021 ರಲ್ಲಿ 237)

ಅಲ್ಲದೆ, ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ, ಲಡಾಖ್, ದಮನ್- ದಿಯು, ದಾದರ್ – ಹವೇಲ್ ನಗರದಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.

ಪೊಲೀಸ್ ಎನ್ಕೌಂಟರ್’ಗಳು ಅಥವಾ ಕಾನೂನುಬಾಹಿರ ಹತ್ಯೆಗಳಿಗೆ ಸಂಬಂಧಿಸಿದಂತೆ 2020 – 21 ರಲ್ಲಿ 82 ಪ್ರಕರಣ ದಾಖಲಾಗಿದ್ದರೆ, 2021 – 22 ರಲ್ಲಿ 151 ಪ್ರಕರಣಗಳು ದಾಖಲಾಗಿವೆ.

ಕಳೆದ ಎರಡು ವರ್ಷಗಳಲ್ಲಿ 54 ಹತ್ಯೆಗಳೊಂದಿಗೆ ಛತ್ತೀಸ್’ಗಡ ಅಗ್ರಸ್ಥಾನದಲ್ಲಿದೆ. ಅಂಕಿಅಂಶಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಎರಡನೇ ಸ್ಥಾನದಲ್ಲಿದೆ ( 2020 ರಲ್ಲಿ ಐದು ಮತ್ತು 2021 ರಲ್ಲಿ 50) ಉತ್ತರ ಪ್ರದೇಶ ( 2020 ರಲ್ಲಿ 16 ಮತ್ತು 2021 ರಲ್ಲಿ 11) ನಂತರದಲ್ಲಿದೆ.



Join Whatsapp