ನ್ಯಾಯಾಧೀಶರ ನೇಮಕ: ಕೊಲಿಜಿಯಂ ಶಿಫಾರಸುಗಳನ್ನು ಕಣ್ಮುಚ್ಚಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ; ಕೇಂದ್ರ ಕಾನೂನು ಸಚಿವ

Prasthutha|

ಲಖನೌ: ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್’ಗೆ ನೇಮಕಾತಿಗಾಗಿ ಸುಪ್ರೀಮ್ ಕೋರ್ಟ್ ಕೊಲಿಜಿಯಂ ಮಾಡಿರುವ ಶಿಫಾರಸುಗಳನ್ನು ಸರ್ಕಾರಕ್ಕೆ ಕಣ್ಣು ಮುಚ್ಚಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

- Advertisement -

ಕೊಲಿಜಿಯಂ ಶಿಫಾರಸು ಮಾಡಿದ ಕೆಲವು ಹೆಸರುಗಳನ್ನು ಅನುಮೋದಿಸದಿರುವ ಹಿಂದೆ ಯಾವಾಗಲೂ ಸರಿಯಾದ ಕಾರಣವಿದೆ ಎಂದು ರಿಜಿಜು ತಿಳಿಸಿದರು.
ಒಂಬತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕಾಗಿ 36 ನ್ಯಾಯಾಂಗ ಅಧಿಕಾರಿ ಮತ್ತು 20 ವಕೀಲರು ಸೇರಿದಂತೆ 56 ಹೆಸರುಗಳನ್ನು ಕೊಲಿಜಿಯಂ ಸೂಚಿಸಿದೆ. ಕೊಲಿಜಿಯಂ ತಂಡದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಾಮೂರ್ತಿಗಳಾದ ಯು. ಯು. ಲಲಿತ್ ಮತ್ತು ಎ.ಎಂ. ಖಾನ್ವಿಲ್ಕರ್ ಅವರನ್ನು ಒಳಗೊಂಡಿದೆ.

ನ್ಯಾಯಾಧೀಶರ ನೇಮಕವನ್ನು ಸರ್ಕಾರ ವಿಳಂಬ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಕೇಂದ್ರ ಕಾನೂನು ಸಚಿವರು, ಸರ್ಕಾರದ ಸ್ಪಷ್ಟ ನಿಲುವಿನ ಬಗ್ಗೆ ಲೋಕಸಭೆಗೆ ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಸದ್ಯ ಭಾರತದಲ್ಲಿ ಬಾಕಿಯಿರುವ ಪ್ರಕರಣಗಳ ಸಂಖ್ಯೆ ನಿಧಾನವಾಗಿ 5 ಕೋಟಿಯತ್ತ ಸಾಗುತ್ತಿದೆ ಮತ್ತು ಇದು ಅತ್ಯಂತ ಕಳವಳಕಾರಿ ವಿಷಯ ಎಂದು ಕೇಂದ್ರ ಕಾನೂನು ಸಚಿವರು ತಿಳಿಸಿದ್ದಾರೆ.

Join Whatsapp