ಅಮಾನತುಗೊಂಡ ಟಿಎಂಸಿ ಸಂಸದರಿಂದ ಗಾಂಧಿ ಪ್ರತಿಮೆ ಬಳಿ ಧರಣಿ

Prasthutha|

ನವದೆಹಲಿ: ರಾಜ್ಯಸಭೆಯಿಂದ ಅಮಾನತುಗೊಂಡ ಟಿಎಂಸಿಯ  ಸಂಸದರು ಬುಧವಾರ ಸಂಸತ್ತಿನ ಹೊರಗೆ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರು.

- Advertisement -

‘ಅಶಿಸ್ತಿನ ವರ್ತನೆ ಮತ್ತು ಕಲಾಪಗಳಿಗೆ ಅಡ್ಡಿಪಡಿಸಿದ’ ಆರೋಪದ ಮೇಲೆ ಮಂಗಳವಾರ ಅಮಾನತುಗೊಂಡ ಸಂಸದರಲ್ಲಿ ಸುಶ್ಮಿತಾ ದೇವ್, ಶಂತನು ಸೇನ್, ಡೋಲಾ ಸೇನ್, ಮೌಸಮ್ ನೂರ್, ಶಾಂತಾ ಛೆಟ್ರಿ, ಅಭಿ ರಂಜನ್ ಬಿಸ್ವರ್ ಮತ್ತು ಮೊಹಮ್ಮದ್ ನದೀದುಲ್ ಹಕ್ ಇದ್ದರು. 

ಸದನದ ಕಾರ್ಯಕಲಾಪಗಳ ಸಂದರ್ಭದಲ್ಲಿ ಒಂದು ದಿನದ ಹಿಂದೆ ಸಭಾಧ್ಯಕ್ಷರ ಪೀಠದ ಮೇಲೆ ಕಾಗದ ಎಸೆದ ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರನ್ನು ಈ ವಾರದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

- Advertisement -

ಈ ಮಧ್ಯೆ, ಸಂಸದರ ಅಮಾನತು ವಿಷಯದ ಬಗ್ಗೆ ಚರ್ಚಿಸಲು ವಿರೋಧ ಪಕ್ಷಗಳ ಸಭೆ ನಡೆಯಿತು. ಆದರೂ, ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಸಭೆಯಿಂದ ಹೊರಗುಳಿದವು.

Join Whatsapp