ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

Prasthutha|

ಇಸ್ಲಾಮಾಬಾದ್: ಸಂಸತ್ತಿನಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು, ಅದು ಚರ್ಚೆಗೆ ಬರುವ ಸಂದರ್ಭದಲ್ಲಿ ವಿರೋಧ ಪಕ್ಷಗಳ ಮೇಲೆ ಮುಖ್ಯವಾಗಿ ನವಾಜ್ ಶರೀಫ್ ರ ಪಿಎಂಎಲ್(ಎನ್) ಮೇಲೆ  ಹಲವು ಸಂಸದರು ಹರಿ ಹಾಯ್ದಿದ್ದಾರೆ.

- Advertisement -

ಆ ಪಕ್ಷಾಧ್ಯಕ್ಷ ಶಹಬಾಜ್ ಶರೀಫ್ ಮತ್ತು ಉಪಾಧ್ಯಕ್ಷ ಮರ್ಯಂ ನವಾಜ್ ರನ್ನು ದುರ್ಬಲ ದ್ರೋಹಿಗಳು ಎಂದಿದ್ದಾರೆ.

“ನಾಪತ್ತೆಯಾಗಿರುವ ನಾಯಕ ಮತ್ತು ಆತನ ಮಗಳು ಸೇನೆಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಶಹಬಾಜ್ ಕಂಡವರ ಬೂಟುಗಳನ್ನೆಲ್ಲ ಪಾಲಿಶ್ ಮಾಡುತ್ತಾರೆ.” ಎಂದು ಇಮ್ರಾನ್ ಹೇಳಿದ್ದಾರೆ. ಇದಕ್ಕೆ ತಿರುಗೆಟು ನೀಡಿರುವ ಮರ್ಯಂ, ನಿಮ್ಮ ಆಟ ಮುಗಿಯಿತು ಎಂದು ಹೇಳಿದ್ದಾರೆ.

- Advertisement -

ಶಹಬಾಜ್, ಪಿಪಿಪಿ ಪಕ್ಷದ ಬಿಲಾವಲ್ ಭುಟ್ಟೋ ಜರ್ದಾರಿ, ಪಾಕಿಸ್ತಾನ ಡೆಮಾಕ್ರೆಟಿಕ್ ಅಲೈಯೆನ್ಸ್ ನ ಮೌಲಾನಾ ಫಜ್ಲುಲ್ ರೆಹಮಾನ ಈ ಮೂವರನ್ನು ದೇಶದ್ರೋಹಿಗಳು, ಭ್ರಷ್ಟರು ಎಂದು ಟೀಕಿಸಿದ್ದಾರೆ.

ಪಂಜಾಬ್ ಪ್ರಾಂತ್ಯದಲ್ಲಿ ದೀರ್ಘ ಕಾಲ ಮುಖ್ಯಮಂತ್ರಿ ಆಗಿದ್ದ ಶೆಹಬಾಜ್ ಅವರು ಈಗ ರಾಷ್ಟ್ರೀಯ ಎಸೆಂಬ್ಲಿ ಎಂಬ ಸಂಸತ್ತಿನಲ್ಲಿ ಪ್ರತಿ ಪಕ್ಷದ ನಾಯಕರು. ಅಣ್ಣ ನವಾಜ್ ಅನರ್ಹಗೊಂಡ ಬಳಿಕ ಅವರು ಪಿಎಂಎಲ್(ಎನ್) ಅಧ್ಯಕ್ಷರಾಗಿದ್ದಾರೆ.

ಮುಂದಿನ ಪ್ರಧಾನಿ ಆಯ್ಕೆಗೆ ಮಾರ್ಚ್ 27ರಂದು ಎಲ್ಲರೂ ಮತದಾನ ಮಾಡಬೇಕು ಎಂದು ನಿರಂತರ ಸಂಸದರ ಸಭೆಗಳನ್ನು ನಡೆಸುತ್ತಿದ್ದಾರೆ.

ಇಮ್ರಾನ್ ಖಾನ್ ಬೆಂಬಲಿಗರೂ ಕೈಕಟ್ಟಿ ಕುಳಿತಿಲ್ಲ. ಅವರೂ ನಿರಂತರ ಬೆಂಬಲದ ಸಭೆ, ಮಾತುಕತೆ ನಡೆಸುತ್ತಿದ್ದಾರೆ. ಇಸ್ಲಾಮಾಬಾದ್ ನಲ್ಲಿ ಮಾರ್ಚ್ 25ರಂದೇ ಎಲ್ಲ ಇಮ್ರಾನ್ ಖಾನ್ ಪರ ಸಂಸದರು ಅವರ ಮನೆಯಲ್ಲಿ ಬಂದು ಸೇರಬೇಕು ಎಂಬ ಸೂಚಿಸಲಾಗಿದೆ. 

2018ರಲ್ಲಿ 69ರ ಪ್ರಾಯದ ಇಮ್ರಾನ್ ಖಾನ್ ರು ಸರಳ ಬಹುಮತದೊಡನೆ ಅಧಿಕಾರಕ್ಕೇರಿದ್ದಾರೆ. ಅದರ ಬಲ ಆಗ 176. ಅಧಿಕಾರದಲ್ಲಿ ಉಳಿಯಲು 172 ಸಂಸದರ ಬೆಂಬಲ ಅಗತ್ಯವಿದ್ದು, ಈಗ ಇಮ್ರಾನ್ ಬೆಂಬಲಕ್ಕಿರುವವರ ಸಂಖ್ಯೆ 155 ಎನ್ನಲಾಗಿದೆ. ಅವರ ಪಕ್ಷವು ಆರು ಸಣ್ಣ ಪಕ್ಷಗಳ 23 ಸದಸ್ಯರ ಬೆಂಬಲ ಹೊಂದಿದೆ. ಹಲವರು ಪಕ್ಷಾಂತರಗೊಂಡಿರುವುದು ಇಮ್ರಾನ್ ದುಸ್ಥಿತಿಗೆ ಕಾರಣವಾಗಿದೆ.   ಇಮ್ರಾನ್ ಖಾನ್ ರನ್ನು ಇಳಿಸಲು ಪ್ರತಿಪಕ್ಷಗಳಿಗೆ 172 ಮತಗಳ ಅಗತ್ಯವಿದೆ. ಕಾನೂನು ಪ್ರಕಾರ ಪಕ್ಷದ ಆದೇಶದ ವಿರುದ್ಧ ಮತ ಹಾಕಿದರೆ ಅವರು ಅನರ್ಹರಾಗುತ್ತಾರೆ.



Join Whatsapp