BSMI ರಿಯಾದ್ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ಹರ್ಷದ್ ಅಯೂಬ್ ಆಯ್ಕೆ

Prasthutha|

ರಿಯಾದ್: BSMI(Bajpe Surrounding Minorities Ithihad) ರಿಯಾದ್ ಇದರ ವಾರ್ಷಿಕ ಮಹಾಸಭೆಯು ಮಾರ್ಚ್18, 2022ರ ಶುಕ್ರವಾರ ಮಧ್ಯಾಹ್ನ ರಿಯಾದಿನ ಅಲ್ನೋ ಬೈಹ್ ಆಡಿಟೋರಿಯಂನಲ್ಲಿ ನಡೆಯಿತು. ಮೊಹಮ್ಮದ್ ರಾಯೀಸ್ ಕಿರಾತ್ ಓದುವ ಮೂಲಕ ಸಭೆಯನ್ನು ಪ್ರಾರಂಭಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು BSMI ರಿಯಾದ್ ಇದರ ಅಧ್ಯಕ್ಷರಾದ ಇರ್ಷಾದ್ ಮೊಯ್ದಿನ್ ವಹಿಸಿದ್ದರು.

- Advertisement -

ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಸಾಬಿತ್ ಬಜ್ಪೆ ಮಂಡಿಸಿದರು.ಬಜ್ಪೆ ಮತ್ತು ಸುತ್ತಮುತ್ತಲ ಜಮಾತ್‌ನ ಅಭಿವೃದ್ಧಿಗೆ ಕೈಗೊಳ್ಳ ಬಹುದಾದ ವಿವಿಧ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಂಸ್ಥೆಯ ಉದ್ದೇಶ ಮತ್ತು ಭವಿಷ್ಯದ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚಿಸಲಾಯಿತು.

ನೂತನ ಸಮಿತಿ ರಚನೆ:
BSMI ರಿಯಾದ್ ಸ್ಥಾಪಕ ಸದಸ್ಯರಾದ ಅಝೀಝ್ ಜಂಬಕಲ್ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ೨೦ ೨೨-೨೦೨೩ ಸಾಲಿನ ಅಧ್ಯಕ್ಷರಾಗಿ ಹರ್ಷದ್ ಅಯೂಬ್, ಉಪಾಧ್ಯಕ್ಷರಾಗಿ ಖಾಲಿದ್ ಕಂಚಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮೊಯ್ದಿದಿನ್ ನಿಸಾರ್, ಕಾರ್ಯದರ್ಶಿಯಾಗಿ ಶಫೀಕ್ ಶರೀಫ್, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ತೌಸೀಫ್ ಸಲಹೆಗಾರಾರಾಗಿ ಅಝೀಝ್ ಜಂಬಕಲ್ ಮತ್ತು ಇರ್ಷಾದ್ ಮೊಯ್ದಿನ್ ಆಯ್ಕೆಯಾದರು.

- Advertisement -

ಅದೇ ರೀತಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಿಸಾರ್ ಅಹಮದ್, ಆಕಿಬ್, ಆಸಿಫ್, ಸಾಬಿತ್ ಹಸನ್, ಸಾಮಿತ್ ಅಬ್ದುಲ್ಲಾ, ಸಲಾವುದ್ದೀನ್, ರಾಝಿಕ್, ಸಲಾಂ, ಅನ್ಸಾರ್ ಅಹಮ್ಮದ್ ಆಯ್ಕೆಯಾದರು. ಅದೇ ರೀತಿ ಬಜ್ಪೆ ಹಾಗೂ ಸುತ್ತಮುತ್ತಲಿನ ಅನಿವಾಸಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು

Join Whatsapp