ಜಿಲ್ಲಾ ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಹೊಸ ಪದ್ಧತಿ ಅಳವಡಿಕೆ: ಡಾ.ಸಿ.ಎನ್.ಅಶ್ವಥ್ ನಾರಾಯಣ

Prasthutha|

ಬೆಂಗಳೂರು: ಜಿಲ್ಲಾ ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ನಮ್ಮ ಸರ್ಕಾರದಲ್ಲಿ ಹೊಸ ಪದ್ಧತಿ ತರಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಹೇಳಿದರು.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ತವರು ಜಿಲ್ಲೆಯಾದರೆ ಅವರದ್ದೇ ಯೋಚನೆ, ಗುಂಪು, ಲೈಕ್ಸ್, ಡಿಸ್ ಲೈಕ್ಸ್, ದೂರುಗಳು ಇದ್ದೇ ಇರುತ್ತದೆ. ತಟಸ್ಥ(ನ್ಯೂಟ್ರಲ್) ವ್ಯಕ್ತಿ ಬೇಕು ಎಂಬ ಕಾರಣಕ್ಕೆ ಬೇರೆ ಜಿಲ್ಲೆಗಳನ್ನು ಕೊಡಲಾಗಿದೆ ಎಂದು ಸಮರ್ಥಿಸಿಕೊಂಡರು.

ರಾಮನಗರ ಜಿಲ್ಲೆ ಉಸ್ತುವಾರಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರಲಿಲ್ಲ. ಇದುವರೆಗೂ ಸ್ವಂತ ಜಿಲ್ಲೆಯನ್ನೇ ಕೊಡುತ್ತಿದ್ದರು. ಹೊಸ ಪ್ರಯತ್ನದಲ್ಲಿ ಇದುವರೆಗೆ ಇದ್ದ ಸವಾಲುಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

- Advertisement -

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರನ್ನು ಎದುರಿಸಲು ರಾಮನಗರ ಜಿಲ್ಲಾ ಉಸ್ತುವಾರಿ ಮುಂದುವರೆಸಿಲ್ಲ. ನಾನು ಬೆಂಗಳೂರಿನಿಂದ ಆಯ್ಕೆ ಆಗಿ ರಾಮನಗರದಲ್ಲಿ ಉಸ್ತುವಾರಿ ನಿರ್ವಹಿಸಲು ಫಿಟ್ ಆಗುವ ಕಾರಣ ಕೊಟ್ಟಿದ್ದಾರೆ ಎಂದರು.

ನಾನು ಈಗಾಗಲೇ ಎರಡೂವರೆ ವರ್ಷದಿಂದ ರಾಮನಗರ ಉಸ್ತುವಾರಿ ನಿರ್ವಹಿಸಿದ್ದೇನೆ ಎಂದ ಅವರು, ಸಚಿವರಾದ ಅಶೋಕ್ ಮತ್ತು ಮಾಧುಸ್ವಾಮಿ ಅವರಿಗೆ ಜಿಲ್ಲಾ ಉಸ್ತುವಾರಿ ಯಾವ ಕಾರಣಕ್ಕೆ ನೀಡಿಲ್ಲ ಎಂಬುದು ನನಗೆ ಗೊತ್ತಿಲ್ಲ. ಅವರಿಗೆ ಇಷ್ಟ ಇತ್ತೋ ಇಲ್ಲವೋ, ಯಾವ ಜಿಲ್ಲೆ ಬೇಕಾಗಿತ್ತೋ ಗೊತ್ತಿಲ್ಲ. ಯಾರಿಗೆ ಯಾವ ಜಿಲ್ಲೆ ವಹಿಸಬೇಕು ಎಂಬುದರ ಬಗ್ಗೆ ಸಿಎಂ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.



Join Whatsapp