ಪಾಕಿಸ್ತಾನದ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಆಯೆಷಾ ಮಲಿಕ್ ನೇಮಕ

Prasthutha|

ಇಸ್ಲಾಮಾಬಾದ್: ಪಾಕಿಸ್ತಾನದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಆಯೇಷಾ ಮಲಿಕ್ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಗೆ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

- Advertisement -

ಆಯೆಷಾ ಮಲಿಕ್ ಹೆಸರು ಫೈನಲ್ ಆಗಿದ್ದರೂ ನೇಮಕಾತಿ ಹಲವಾರು ತಿಂಗಳುಗಳಿಂದ ವಿಳಂಬವಾಗಿತ್ತು. ಬಾರ್ ಕೌನ್ಸಿಲ್ ಅಲ್ಲದೆ, ನ್ಯಾಯಾಂಗದ ವಿವಿಧ ಇಲಾಖೆಗಳು ಈ ವಿಷಯದಲ್ಲಿ ಅಡೆತಡೆಗಳನ್ನು ಒಡ್ಡುತ್ತಾ ಇದ್ದವು. ಅಂತಿಮವಾಗಿ ಸೋಮವಾರ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಗುಲ್ಝಾರ್ ಅಹ್ಮದ್ ಅವರು ಆಯೇಷಾ ಮಲಿಕ್ ಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದ್ದಾರೆ.

ನ್ಯಾಯಮೂರ್ತಿ ಆಯೆಷಾ ಮಲಿಕ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದು, ಸುಮಾರು 20 ವರ್ಷಗಳ ಕಾಲ ಲಾಹೋರ್ ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿದ್ದರು. ಕಳೆದ ವರ್ಷ ಮಹಿಳೆಯರ ವಿರುದ್ಧ ತಾರತಮ್ಯ ಮಾಡುವ ಕಾನೂನನ್ನು ರದ್ದುಗೊಳಿಸಿ ಗಮನ ಸೆಳೆದಿದ್ದರು.

- Advertisement -

ಪ್ರಧಾನ ಮಂತ್ರಿ ಇಮ್ರಾನ್ ಖಾನ್ ನ್ಯಾಯಮೂರ್ತಿ ಆಯೇಷಾ ಅವರನ್ನು ಅಭಿನಂದಿಸಿದ್ದಾರೆ.

Join Whatsapp