ರಾಜಕೀಯದಲ್ಲಿ ನಾನಿನ್ನೂ ಅಂಬೆಗಾಲಿಡುತ್ತಿದ್ದೇನೆ, ಮುಖ್ಯಮಂತ್ರಿಯಾಗುವ ಆಸೆ ಇಲ್ಲ: ಬಿ ವೈ ವಿಜಯೇಂದ್ರ

Prasthutha|

ಹಾಸನ: ರಾಜಕೀಯದಲ್ಲಿ ನಾನಿನ್ನೂ ಅಂಬೆಗಾಲು ಇಡುತ್ತಿದ್ದೇನೆ ಮುಖ್ಯಮಂತ್ರಿಯಾಗುವ ಯಾವುದೇ ಆಸೆ ಹೊಂದಿಲ್ಲ, ಪಕ್ಷದ ತೀರ್ಮಾನ ಅಂತಿಮ ತೀರ್ಮಾನವಾಗಿದ್ದು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ತಿಳಿಸಿದರು.

- Advertisement -

ದಕ್ಷಿಣ ಪದವೀಧರರ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ನಾರಾಯಣ ಗೌಡ, ಮುರುಗೇಶ್ ನಿರಾಣಿ ಇಂತಹ ತಪ್ಪು ಹೇಳಿಕೆ ನೀಡಬಾರದು ಪಕ್ಷದ ದೊಡ್ಡ ನಾಯಕರ ತೀರ್ಮಾನದಂತೆ ಹುದ್ದೆಗಳು ದೊರೆಯಲಿವೆ ಅಲ್ಲದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡಲಿದೆ ಎಂದರು.

ಈ ಹಿಂದೆ ಯಡಿಯೂರಪ್ಪ ಅವರ ಬೆನ್ನಿಗೆ ಚೂರಿ ಹಾಕಿದರು ಎಂಬ ಹೇಳಿಕೆ ಬಗ್ಗೆ ಮಾತನಾಡಿದ ಅವರು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ನೇತೃತ್ವದಲ್ಲಿ ಸರಕಾರ ಇದ್ದರೆ ನಮಗೆ ಉಳಿವು ಇಲ್ಲ ಎಂಬ ಉದ್ದೇಶ ದಿಂದ ಅವರ ಬೆನ್ನಿಗೆ ಚೂರಿ ಆಗುವ ಕೆಲಸ ಮಾಡಿದ್ದಾರೆ ಎಂಬ ಹೇಳಿಕೆ ನೀಲಾಗಿದೆ ಎಂದು ಸ್ಪಷ್ಟ ಪಡಿಸಿದರು. ಈ ಸಂದರ್ಭದಲ್ಲಿ ಶಾಸಕ ಪ್ರೀತಂ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲ ಹಳ್ಳಿ ಸುರೇಶ್, ಲಲಾಟ ಮೂರ್ತಿ, ಆರ್. ಮೋಹನ್, ನವಿಲೇ ಅಣ್ಣಪ್ಪ ಸೇರಿದಂತೆ ಇತರರು ಇದ್ದರು.



Join Whatsapp