ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ: ಮುಸ್ಲಿಮ್ ಬಾಹುಳ್ಯದ ಕ್ಷೇತ್ರಗಳನ್ನು ಪರಿಮಿತಿಗೊಳಿಸಿದ ಸಮಿತಿ

Prasthutha|

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್ ವಿಂಗಡಣಾ ಸಮಿತಿಯು ಮಾರ್ಚ್ 14ರಂದು ವರದಿ ಒಪ್ಪಿಸಿದೆ. ಹಿಂದಿನ ಬಾಗಿಲಿನಿಂದ ಕಾಶ್ಮೀರದಲ್ಲಿ ಆಳುತ್ತಿರುವ ಬಿಜೆಪಿ ಕೆಲವು ಕಡೆಯ ಮುಸ್ಲಿಮ್ ಜನ ಬಾಹುಳ್ಯದ ಬಗ್ಗೆ ತಲೆ ಕೆಡಿಸಿಕೊಂಡಿದೆ. ಆದ್ದರಿಂದ ಕ್ಷೇತ್ರ ಪರಿಮಿತಿಗೊಳಿಸಿ ಚುನಾವಣೆ ಗೆಲ್ಲುವ ಲೆಕ್ಕಾಚಾರದಲ್ಲಿ ಬಿಜೆಪಿ ತೊಡಗಿಕೊಂಡಿದೆ.

- Advertisement -


ಜಮ್ಮು ಮತ್ತು ಕಾಶ್ಮೀರದ ಲೋಕಸಭೆ ಮತ್ತು ವಿಧಾನ ಸಭಾ ಕ್ಷೇತ್ರಗಳಿಗೆ ಗಡಿ ಗೆರೆ ಪರಿಮಿತಿ ನೀಡಲು ರಚಿಸಿದ್ದ ಡಿಲಿಮಿನೇಶನ್ ಆಯೋಗವು ವರದಿಯು ಮಾರ್ಚ್ 14ರಂದು ಜಮ್ಮು ಮತ್ತು ಕಾಶ್ಮೀರದ ಹಾಗೂ ಭಾರತೀಯ ಗೆಜೆಟ್ ನಲ್ಲಿ ಪ್ರಕಟವಾಗಿದೆ. ಏಳು ಹೊಸ ವಿಧಾನ ಸಭಾ ಕ್ಷೇತ್ರಗಳ ಸೃಷ್ಟಿ ಮತ್ತು ಗಡಿಗೆರೆ ಬದಲಾವಣೆ ಅದರ ಉದ್ದೇಶ. ಕಾಶ್ಮೀರ ಕಣಿವೆಯಲ್ಲಿ ಚುನಾವಣೆ ಗೆಲ್ಲಲು ಬಿಜೆಪಿ ಅಡ್ಡ ಹಾದಿ ಹಿಡಿದಿದೆ ಎಂದು ಕಾಶ್ಮೀರ ಕಣಿವೆಯ ರಾಜಕೀಯ ವಿಶ್ಲೇಷಕರು ಟೀಕಿಸಿದ್ದಾರೆ.


ಹಿಂದೂ ಜನಸಂಖ್ಯೆ ಅಧಿಕವಿರುವ ಜಮ್ಮು ಪ್ರದೇಶದೊಳಗೆ ಕಣಿವೆಯ ಕ್ಷೇತ್ರಗಳನ್ನು ಓರೆಕೋರೆಯಾಗಿ ಒಳ ಸೇರಿಸುವ ಪ್ರಸ್ತಾಪವೂ ಇದೆ. ಲೋಕಸಭೆಗೆ ಸಂಬಂಧಿಸಿದಂತೆ ಇಂಥ ಯಾವುದೇ ಪ್ರಸ್ತಾಪ ಇಲ್ಲ. ಆಗಸ್ಟ್ 2019ರಲ್ಲಿ ಕಾಶ್ಮೀರದ 370ನೇ ವಿಧಿ ರದ್ದು ಮಾಡಿ ಅದನ್ನು ರಾಜ್ಯದ ಸ್ಥಾನಮಾನದಿಂದ ಇಳಿಸಿದ ಬಳಿಕ ಮಂಗಳವಾರ ಪ್ರಧಾನಿ ಮೋದಿಯವರು ಜಮ್ಮು ಕಾಶ್ಮೀರದ ರಾಜಕೀಯ ಮುಖಂಡರ ಜೊತೆಗೆ ಮಾತುಕತೆ ನಡೆಸಿದರು. ನ್ಯಾಯಾಲಯದ ಆದೇಶ ಮತ್ತು ಸಂವಿಧಾನದ ಆಶಯ ಮೀರಿ ಸರಕಾರವಿಲ್ಲದ ಸ್ಥಿತಿಯ ಕಾಶ್ಮೀರಕ್ಕೆ ಹೊಸ ಸರಕಾರ ತರಲೇ ಬೇಕಾಗಿದೆ.

- Advertisement -


ಇನ್ನು ಕೆಲವೇ ತಿಂಗಳಲ್ಲಿ ಕ್ಷೇತ್ರ ವಿಂಗಡಣೆ, ಅದರ ಪರಿಮಿತಿಯ ಬಗೆಗೆ ದಿನ ಎಳೆಯುವ ಲೆಕ್ಕಾಚಾರವೂ ಮೋದಿ ಸರಕಾರಕ್ಕಿದೆ.
2018ರ ಜೂನ್ ತಿಂಗಳಲ್ಲಿ ಪಿಡಿಪಿ ಪಕ್ಷದ ಜೊತೆಗಿನ ಮೈತ್ರಿ ಸರಕಾರವನ್ನು ಬಿಜೆಪಿ ಕೊನೆಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಿದಾಗಿನಿಂದ ಅಲ್ಲಿ ಕೇಂದ್ರದ ಒಳ ಸರಕಾರವೇ ಇದೆ. ಆದರೆ 370ನೇ ವಿಧಿಯನ್ನು ನೀಗಿದ್ದು ಇಲ್ಲವೇ ರಾಜ್ಯವನ್ನು ವಿಂಗಡಿಸಿ ಕೇಂದ್ರಾಡಳಿತ ಪ್ರದೇಶ ಮಾಡಿದ್ದು ವಿಧಾನಸಭೆಯ ಮೂಲಕವಲ್ಲ. ಮೋದಿ ಸರಕಾರವು ಒಂದೂವರೆ ವರುಷದಿಂದಲೂ ಕ್ಷೇತ್ರ ವಿಂಗಡಣೆಯ ಬಳಿಕ ಚುನಾವಣೆ ಕೂಡಲೇ ನಡೆಸಲಾಗುವುದು ಎಂದು ಹೇಳುತ್ತಲೇ ಇದ್ದಾರೆ. ಒಂದು ಪ್ರದೇಶವನ್ನು ನಾಲ್ಕು ವರುಷಗಳಿಂದ ಏಕೆ ಸರಕಾರ ವಂಚಿತ ಮಾಡಲಾಗಿದೆ. ಡಿಲಿಮಿನೇಶನ್ ಕಮಿಶನ್ 2020ರಲ್ಲೇ ನೇಮಕಗೊಂಡರೂ ಇಷ್ಟು ದಿನ ಕೆಲಸ ಏಕೆ ಆಗಿಲ್ಲ? ಹಿಂದಿನ ಕ್ಷೇತ್ರಾವಾರು ಚುನಾವಣೆ ನಡೆಸಿ, ಮುಂದೆ ಏಕೆ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಡಿಲಿಮಿನೇಶನ್ ಎಂದರೆ ಲೋಕ ಸಭೆ ಇಲ್ಲವೇ ವಿಧಾನ ಸಭೆಯ ಒಂದು ಕ್ಷೇತ್ರದ ಗಡಿಗೆರೆಗಳನ್ನು ಪರಿಮಿತಿಗೊಳಪಡಿಸುವುದಾಗಿದೆ. ಜನಸಂಖ್ಯೆಯು ಕ್ಷೇತ್ರಗಳಲ್ಲಿ ಏರುಪೇರಾಗುವುದರಿಂದ ಪ್ರತಿ ಬಾರಿ ಜನಗಣತಿ ನಡೆದ ಬಳಿಕ ಇಲ್ಲವೇ ಸರಕಾರ ನಿರ್ಧರಿಸಿದಾಗ ಇದನ್ನು ಮಾಡಲಾಗುತ್ತದೆ. ಸಂವಿಧಾನದ ಆರ್ಟಿಕಲ್ 82ರ ಪ್ರಕಾರ ಪ್ರತಿ ಬಾರಿಯ ಜನಗಣತಿಯ ಬಳಿಕ ಕೇಂದ್ರ ಸರಕಾರವು ಡಿಲಿಮಿನೇಶನ್ ಆಯೋಗ ಇಲ್ಲವೇ ಸಮಿತಿ ರಚಿಸುತ್ತದೆ. ಈ ಆಯೋಗ ಒಮ್ಮೆ ತೀರ್ಮಾನಿಸಿದರೆ ಅದನ್ನು ಸಂಸತ್ತು ಕೇಳುವಂತಿಲ್ಲ, ನ್ಯಾಯಾಲಯವೂ ಬದಲಿಸುವಂತಿಲ್ಲ. ಆದರೆ ಆಳುವ ಸರಕಾರಗಳು ಇವನ್ನೆಲ್ಲ ತಮಗೆ ಬೇಕಾದಂತೆ ಮಾಡಿಕೊಳ್ಳುವುದು ಭಾರತದ ವಿಶೇಷ.

ಪರಿಮಿತಿ ಆಯೋಗದ ಚೇರ್ಮನ್ ಆಗಿ ನಿವೃತ್ತ ಇಲ್ಲವೇ ಹಾಲಿ ಸುಪ್ರೀಂ ಕೋರ್ಟಿನ ಜಡ್ಜ್ ಇರುತ್ತಾರೆ. ಮುಖ್ಯ ಚುನಾವಣಾ ಕಮಿಶನರ್, ಇಲ್ಲವೇ ಇಬ್ಬರು ಚುನಾವಣಾ ಕಮಿಶನರ್ ಗಳು ಮತ್ತು ಯಾವ ರಾಜ್ಯದ ಕ್ಷೇತ್ರ ವಿಂಗಡಣೆ ಆಗುತ್ತದೋ ಆ ರಾಜ್ಯದ ಚುನಾವಣಾ ಆಯುಕ್ತರು ಅದರಲ್ಲಿ ಇರುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಡಿಲಿಮಿನೇಶನ್ ಕಮಿಶನ್ ನೇಮಕವಾದುದು 1952ರಲ್ಲಿ. ಅನಂತರ 1963, 1973, 2002ರಲ್ಲಿ ಅಲ್ಲಿ ಪರಿಮಿತಿ ಸಮಿತಿಗಳು ರಚನೆಯಾಗಿವೆ.


ಸಂವಿಧಾನದ ವಿಧಿ 370ರಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಇದ್ದುದರಿಂದ ಇಲ್ಲಿ ಪರಿಮಿತಿ ಆಯೋಗದ ರಚನೆ ಎನ್ನುವುದು ಬೇರೆ ರಾಜ್ಯಗಳಿಗಿಂತ ಸ್ವಲ್ಪ ಭಿನ್ನವಾದುದಾಗಿದೆ. ಜಮ್ಮು ಮತ್ತು ಕಾಶ್ಮೀರದ ಲೋಕಸಭಾ ಕ್ಷೇತ್ರಗಳ ಡಳಿತವು ಭಾರತ ಸಂವಿಧಾನದ ರೀತಿಯ ಕೇಂದ್ರದ ಸುಪರ್ದಿಗೆ ಸೇರಿದೆ. ವಿಧಾನ ಸಭೆಗಳ ಸುಪರ್ದಿಯು 1957ರ ಜಮ್ಮು ಮತ್ತು ಕಾಶ್ಮೀರ ಜನಪ್ರತಿನಿಧಿ ಕಾಯ್ದೆಯಂತೆ ಜಮ್ಮು ಕಾಶ್ಮೀರದ ಸಂವಿಧಾನದ ಅಡಿ ಬರುತ್ತದೆ.


ಜಮ್ಮು ಮತ್ತು ಕಾಶ್ಮೀರವು ರಾಷ್ಟ್ರಪತಿ ಆಡಳಿತದಡಿ ಇದ್ದಾಗ 1995ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ಪರಿಮಿತಿ ಕಾರ್ಯವು ನಿವೃತ್ತ ಜಸ್ಟೀಸ್ ಕೆ. ಕೆ. ಗುಪ್ತ ಅವರು ಚೇರ್ಮನ್ ಆಗಿದ್ದ ಡಿಲಿಮಿನೇಶನ್ ಕಮಿಶನ್ ನಿಂದ ಆಯಿತು. ಅದೇ ಕೊನೆ. ಮುಂದಿನ ಕ್ಷೇತ್ರ ಪುನರ್ ವಿಂಗಡಣೆ ಕೆಲಸವು 2005ರಲ್ಲಿ ಆಗಬೇಕಿತ್ತು. ಆದರೆ 2002ರಲ್ಲಿ ಫಾರೂಕ್ ಅಬ್ದುಲ್ಲಾರ ಸರಕಾರವು ಕ್ಷೇತ್ರ ವಿಂಗಡಣೆಯನ್ನು 2026ರವರೆಗೆ ಸ್ಥಗಿತಗೊಳಿಸಿತು. 1957ರ ಜಮ್ಮು ಮತ್ತು ಕಾಶ್ಮೀರ ಜನಪ್ರತಿನಿಧಿ ಕಾಯ್ದೆಯಂತೆ ಮತ್ತು ಜಮ್ಮು ಮತ್ತು ಕಾಶ್ಮೀರದ ಸಂವಿಧಾನದ ಸೆಕ್ಷನ್ 47(3)ರ ಪ್ರಕಾರ ಅದು ಸಾಧ್ಯವಾಗಿತ್ತು.

Join Whatsapp