ಅಕ್ರಮ ಸಂಬಂಧ ಆರೋಪ: ವಿವಸ್ತ್ರಗೊಳಿಸಿ, ಕೂದಲು ಕತ್ತರಿಸಿ ಶಿಕ್ಷಕನ ಮೇಲೆ ಹಲ್ಲೆ

Prasthutha|

ಜೈಪುರ: ತಮ್ಮ ಹಳ್ಳಿಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಶಿಕ್ಷಕನೋರ್ವನನ್ನು ಅಪಹರಿಸಿ, ಥಳಿಸಿ ಚಿತ್ರಹಿಂಸೆ ನೀಡಿದ ಘಟನೆ ರಾಜಸ್ತಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಆರೋಪಿಗಳು ಶಿಕ್ಷಕನ ಕೂದಲನ್ನು ಕತ್ತರಿಸಿ ವಿವಸ್ತ್ರಗೊಳಿಸಿದ್ದಲ್ಲದೆ ಆತ ಚಲಾಯಿಸುತ್ತಿದ್ದ ಕಾರನ್ನು ಸಹ ಹಾನಿಗೊಳಿಸಿದ್ದಾರೆ.

ವಿವಾಹಿತ ಮತ್ತು ಇಬ್ಬರು ಮಕ್ಕಳ ತಂದೆಯಾಗಿರುವ ಆತ ಸರ್ಕಾರಿ ಶಾಲೆಯಲ್ಲಿ ಕೆಲಸಮಾಡುತ್ತಿದ್ದು, ತಮ್ಮ ಗ್ರಾಮದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಚಂದನ್ ಪ್ರದೇಶದ ಸೋಜಿಯೋನ್ ಕಿ ಧನಿಯಲ್ಲಿ ಮಹಿಳೆಯನ್ನು ಭೇಟಿಯಾಗಲು ಹೋಗುತ್ತಿದ್ದ ಎನ್ನಲಾಗಿದೆ.

- Advertisement -

ಕೆಲವು ಸಮಯದಿಂದ ಇದನ್ನು  ಗಮನಿಸುತ್ತಿದ್ದ ಮಹಿಳೆಯ ಸಂಬಂಧಿಕರಾಗಿರುವ ಆರೋಪಿಗಳು, ಜೂನ್ ೨೦ ರಂದು ರಾತ್ರಿ ಮಹಿಳೆಯನ್ನು ಭೇಟಿಯಾಗಿ  ಹಿಂದಿರುಗುತ್ತಿದ್ದಾಗ, ಆರೋಪಿಗಳು ಆತನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.  ಅಲ್ಲಿ ಅವರು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಆತನನ್ನು ವಿವಸ್ತ್ರಗೊಳಿಸಿ, ಥಳಿಸಿದರು ಮತ್ತು ಕೂದಲನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾಹೇತರ ಸಂಬಂಧದ ಹಿನ್ನೆಲೆ ಈ ದಾಳಿ ನಡೆದಿದ್ದು, ಈ ಕುರಿತು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸದರ್ ಪೊಲೀಸ್ ಠಾಣಾಧಿಕಾರಿ ದೇವಕಿಶನ್ ಹೇಳಿದ್ದಾರೆ.

Join Whatsapp