ಬುಲ್ಡೋಜರ್ ಕಾರ್ಯಾಚರಣೆ : ಜಮಿಯತ್-ಉಲಮಾ ಹಿಂದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಜೂನ್ 29ಕ್ಕೆ ಮುಂದೂಡಿಕೆ

Prasthutha|

ನವದೆಹಲಿ: ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸದೆ ರಾಜ್ಯದಲ್ಲಿ ಆಸ್ತಿಗಳ ನೆಲಸಮವನ್ನು ನಡೆಸದಂತೆ ನೋಡಿಕೊಳ್ಳಲು ಉತ್ತರ ಪ್ರದೇಶದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಜಮಿಯತ್-ಉಲಮಾ-ಇ-ಹಿಂದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಜೂನ್ 29 ಕ್ಕೆ ಮುಂದೂಡಿದೆ.

- Advertisement -

ಯುಪಿ ಸರ್ಕಾರದ ಅಫಿದವಿತ್ ಗೆ ಉತ್ತರಿಸಲು ಹೆಚ್ಚಿನ ಸಮಯವನ್ನು ಕೋರಿ ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣನ್ ಅವರ ಮನವಿಯ ಮೇರೆಗೆ ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ಸುಧಾಂಶು ಧುಲಿಯಾ ಅವರ ರಜಾಕಾಲದ ಪೀಠವು ಪ್ರಕರಣವನ್ನು ಮುಂದೂಡಿತು.

Join Whatsapp