ಟಿಪ್ಪುಸುಲ್ತಾನ್ ಶೆಟ್ಟರ್, ಕಾರಜೋಳರ ಎದೆಯಲ್ಲಿದ್ದಾರೆ: ಅಶೋಕ್’ಗೆ ಬಿಕೆ ಹರಿಪ್ರಸಾದ್ ತಿರುಗೇಟು

Prasthutha|

ಬೆಂಗಳೂರು: ಟಿಪ್ಪು ಸುಲ್ತಾನ್ ಹೆಸರು ಕೇಳಿದ ಕೂಡಲೇ ಸಿದ್ದರಾಮಯ್ಯ ಮೈಮೇಲೆ ಬಂದ ಹಾಗೆ ಆಡುತ್ತಾರೆ ಎಂದು ಹೇಳಿಕೆ ನೀಡಿದ್ದ ಸಚಿವ ಆರ್ ಅಶೋಕ್’ಗೆ ತಿರುಗೇಟು ನೀಡಿರುವ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿಕೆ ಹರಿಪ್ರಸಾದ್, ಟಿಪ್ಪುಸುಲ್ತಾನ್ ಬಿಜೆಪಿ ಹಾಗೂ ಶೆಟ್ಟರ್, ಕಾರಜೋಳರ ಎದೆಯಲ್ಲಿದ್ದಾರೆ. ಅನುಮಾನವಿದ್ದರೆ ಬಗೆದು ನೋಡಿ ಎಂದು ವ್ಯಂಗ್ಯವಾಡಿದ್ದಾರೆ.

- Advertisement -

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರವು ತನ್ನ ನಾಡಿನ ಸಾಂಸ್ಕೃತಿಕ ನಾಯಕಿರಿಗೆ ಮಾಡಿರುವ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ, ಈ ಕಾರಣಕ್ಕಾಗಿಯೇ ಟಿಪ್ಪು ಸುಲ್ತಾನ್ ವಿಷಯಗಳನ್ನು ತಂದು ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನವನ್ನು ಅಶೋಲ್ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.

ಟಿಪ್ಪು ಪೋಷಕು ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಗಿನ ಸಿಎಂ ಜಗದೀಶ್ ಶೆಟ್ಟರ್ ರೊಂದಿಗೆ ನಿಂತದ್ದು ನೀವೇ ಅಲ್ಲವೇ ಅಶೋಕ್, ನಿಮಗೆ ಈ ಫೋಟೋ ನೆನಪಿದೆಯಾ ಎಂದು ಫೋಟೋವನ್ನು ಪ್ರದರ್ಶಿಸಿ ಹರಿಪ್ರಸಾದ್ ಪ್ರಶ್ನಿಸಿದರು. ನೀವು ಮೈಮೇಲೆ ಅಲ್ಲ, ತಲೆ ಮೇಲೆ ಹೊತ್ತು ಮೆರೆಸಿದ್ದನ್ನು ಮರೆತಿದ್ದೀರಾ, ನಿಮ್ಮ ಸುಳ್ಳುಗಳನ್ನು ಇತಿಹಾಸವು ದಾಖಲೆ ಸಮೇತ ಬೆತ್ತಲೆಗೊಳಿಸುತ್ತೆ ಜಾಗೃತರಾಗಿರಿ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

ಮೈಸೂರಿನ ಹುಲಿ ಸೇರಿದಂತೆ ವೀರಾಧಿವೀರ, ಶೂರಾಧಿ ಶೂರ, ಮಹಾನ್ ಪರಾಕ್ರಮಿ ಬಿರುದುಗಳನ್ನು ನೀಡಿದ್ದು ಇತಿಹಾಸಕಾರರೇ ಹೊರತು ಕಾಂಗ್ರೆಸ್ ಪಕ್ಷವಲ್ಲ, ಟಿಪ್ಪುವಿನ ಕುರಿತಾದ 425ಪುಟಗಳ ಕಥನ ಪುಸ್ತಕವನ್ನು ಬಿಜೆಪಿ ಪ್ರಕಟಿಸಿರುವುದು ಮರೆತುಹೋಯಿತಾ ಎಂದು ಬಿಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

Join Whatsapp