ಅಕ್ರಮ ಗೋ ಸಾಗಾಟ| ಇಬ್ಬರ ಬಂಧನ

Prasthutha|

►ವಿಶ್ವನಾಥ ಬಾಳ್ತಿಲ ಹಾಗೂ ಮ್ಯಾಕ್ಸಿಂ ಬಂಧಿತ ಆರೋಪಿಗಳು

- Advertisement -

ಕಡಬ: ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಜಾನುವಾರು ಸಮೇತ ಹಿಡಿದು ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

ಮ್ಯಾಕ್ಸಿಂ ಹಾಗೂ ವಿಶ್ವನಾಥ ಬಾಳ್ತಿಲ ಎಂಬ ಇಬ್ಬರು ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇಬ್ಬರು ಆರೋಪಿಗಳನ್ನು ಭಜರಂಗದಳ ಕಲ್ಲಡ್ಕ ಪ್ರಖಂಡದ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೆಲ್ಕಾರ್ ಸಮೀಪದ ಕಂದೂರು ಎಂಬಲ್ಲಿ ದನವೊಂದನ್ನು ಆಪೆ ರಿಕ್ಷಾದಲ್ಲಿ ಸಾಗಿಸುವ ಬಗ್ಗೆ ಖಚಿತ ಮಾಹಿತಿ ಪಡೆದು ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp