ಉತ್ತರ ಮುಂಬೈ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕ್ರಮ ಬಾಂಗ್ಲಾದೇಶಿಗ! | ಬಂಧನ

Prasthutha|

ಮುಂಬೈ : ಸಾಮಾನ್ಯವಾಗಿ ಬಿಜೆಪಿ ಮುಖಂಡರು ಮಾತನಾಡುವಾಗ, ಮುಸ್ಲಿಂ ದ್ವೇಷ ಸೃಷ್ಟಿಸಲು ಸಾಮಾನ್ಯವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಿ ವಲಸಿಗರ ಬಗ್ಗೆಯೂ ಮಾತನಾಡುವುದಿದೆ. ಆದರೆ, ಇದೀಗ ಮುಂಬೈಯಲ್ಲಿ ಬಂಧಿತನಾಗಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

- Advertisement -

ಕಳೆದ ವಾರ ಮುಂಬೈ ಪೊಲೀಸರು ಅಕ್ರಮ ಬಾಂಗ್ಲಾದೇಶಿ ವಲಸಿಗನೊಬ್ಬನನ್ನು ಬಂಧಿಸಿದ್ದರು. ಇದೀಗ, ಆತ ಬಿಜೆಪಿ ಉತ್ತರ ಮುಂಬೈ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನಾಗಿದ್ದ ಎಂಬುದು ಗೊತ್ತಾಗಿದೆ. ಆರೋಪಿ ರುಬೆಲ್ ಜೋನು ಶೇಖ್ (24) ಕಾನೂನು ಬಾಹಿರ ದಾಖಲೆಗಳೊಂದಿಗೆ ಭಾರತದಲ್ಲಿ ನೆಲೆಸಿದ್ದಾನೆ ಎಂದೂ ತಿಳಿದು ಬಂದಿದೆ.

ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಟ್ವೀಟ್ ಮಾಡಿದ್ದಾರೆ. “ಇದು ಬಿಜೆಪಿಯ ‘ಸಂಘ ಜಿಹಾದ್’ ಆಗಿದೆಯಾ? ಕೆಲವು ಬಿಜೆಪಿ ನಾಯಕರು ಗೋಮಾತೆಯನ್ನು ಕಳ್ಳ ಸಾಗಾಟ ಮಾಡುವಾಗ ಸಿಕ್ಕಿಬಿದ್ದಿದ್ದರು, ಇನ್ನು ಕೆಲವರು ಐಎಸ್ ಐ ಏಜೆಂಟರೆಂಬುದು ಸಾಬೀತಾಗಿದೆ. ಇದೀಗ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರುಬೆಲ್ ಶೇಖ್ ಬಾಂಗ್ಲಾದೇಶಿ ಎಂಬುದು ಗೊತ್ತಾಗಿದೆ. ಬಿಜೆಪಿಯ ಸಿಎಎ ಕಾಯ್ದೆಯಲ್ಲಿ ಇದಕ್ಕೆ ಏನಾದರೂ ಅವಕಾಶವಿದೆಯೇ?” ಎಂದು ಸಚಿನ್ ಸಾವಂತ್ ಹೇಳಿದ್ದಾರೆ.

- Advertisement -

ನಕಲಿ ದಾಖಲೆಗಳನ್ನು ಹೊಂದಿದ್ದುದಕ್ಕಾಗಿ ನಾವು ಆತನನ್ನು ಬಂಧಿಸಿದ್ದೇವೆ. ನಕಲಿ ದಾಖಲೆಗಳೊಂದಿಗೆ ಆತ ಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದ. ಪ್ರಸ್ತುತ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಭಲೇರಾವ್ ಶೇಖರ್ ಹೇಳಿದ್ದಾರೆ. ಕಳೆದ ವಾರ ರುಬೆಲ್ ಶೇಖ್ ನನ್ನು ಬಂಧಿಸಲಾಗಿತ್ತು.

 ರುಬೆಲ್ ಶೇಖ್ ಬಾಂಗ್ಲಾದೇಶದ ಜಸೂರು ಜಿಲ್ಲೆ ಬೊವಾಲಿಯ ಗ್ರಾಮದ ನಿವಾಸಿ. ಯಾವುದೇ ದಾಖಲೆಗಳಿಲ್ಲದೆ ಆತ ಭಾರತ ಪ್ರವೇಶಿಸಿದ್ದಾನೆ. ಅಲ್ಲದೆ, ಉತ್ತರ ಮುಂಬೈ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನಾಗಿಯೂ ಆತ ಕೆಲಸ ಮಾಡಿದ್ದಾನೆ. ಅಸಲಿಯಂತಿರುವ ಎಲ್ಲಾ ನಕಲಿ ದಾಖಲೆಗಳನ್ನು ಆತ ಸಿದ್ಧಪಡಿಸಿಕೊಂಡಿದ್ದಾನೆ. ಸ್ಥಳೀಯವಾಗಿ ಆತ ದಾಖಲೆ ಪಡೆದಿರುವ ಸ್ಥಳಗಳಿಗೆ ಹೋಗಿ ಪರಿಶೀಲಿಸಿದಾಗ, ಎಲ್ಲಾ ದಾಖಲೆಗಳು ನಕಲಿ ಎಂಬುದು ಸಾಬೀತಾಗಿದೆ. ವಿಷಯಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಫೋಟೊ ಕೃಪೆ : ಇಂಡಿಯಾ ಟುಡೇ

Join Whatsapp