ಇಂಡಿಯಾ ಫ್ರೆಟರ್ನಿಟಿ ಫೋರಂ (IFF) ಸೌದಿ ಅರೇಬಿಯಾದ ಸ್ಮರಣ ಸಂಚಿಕೆ ‘ದಿ ಡಿಸ್ಟೆನ್ಸ್’ ನ ವಿತರಣಾ ಕಾರ್ಯಕ್ರಮಕ್ಕೆ ಅಸೀರ್ ಪ್ರಾಂತ್ಯದಲ್ಲಿ ಚಾಲನೆ

Prasthutha: April 5, 2021

ಇಂಡಿಯಾ ಫ್ರೆಟರ್ನಿಟಿ ಫೋರಂ (IFF) ಸೌದಿ ಅರೇಬಿಯ ವತಿಯಿಂದ ಕೋವಿಡ್ 19‌ರ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಡಿದ ಹಾಗೂ ಕಳೆದ ಹಲವಾರು ವರ್ಷಗಳಿಂದ ಅನಿವಾಸಿ ಭಾರತೀಯರಿಗೆ ನೀಡುತ್ತಿರುವ ಸಾಮಾಜಿಕ ಸೇವೆಗಳ ಕಿರುಪರಿಚಯದ “ದಿ ಡಿಸ್ಟೆನ್ಸ್” ಸ್ಮರಣ ಸಂಚಿಕೆಯ ಅಸೀರ್ ಪ್ರಾಂತ್ಯದ ವಿತರಣಾ ಕಾರ್ಯಕ್ರಮಕ್ಕೆ ದಿನಾಂಕ 03 ಎಪ್ರಿಲ್ 2021 ರಂದು  ಸೌದಿ ಅರೇಬಿಯಾದ ಕಮೀಸ್ ಮುಶಾಯತ್ ನಲ್ಲಿರುವ  ಹೋಟೆಲ್ ತಾಜ್ ನಲ್ಲಿ‌ ಚಾಲನೆ ನೀಡಲಾಯಿತು.

 IFF ಅಸೀರ್ ರೀಜನಲ್ ಅಧ್ಯಕ್ಷರಾದ ಸಲೀಂ ಜಿ.ಕೆ ಗುರುವಾಯನಕೆರೆಯವರು ಕಮೀಶ್ ಮುಶಾಯತ್ ನ ಮೈ ಕೇರ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾಗಿರುವ ಡಾ. ಬಿನು ಕುಮಾರ್  ರವರಿಗೆ “ದಿ ಡಿಸ್ಟೆನ್ಸ್” ಸ್ಮರಣ ಸಂಚಿಕೆಯ  ಪ್ರತಿಯನ್ನು ಹಸ್ತಾಂತರಿಸುವ ಮೂಲಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಐ.ಎಫ್.ಎಫ್ ಅಭಾ ಕೇರಳ ಚಾಪ್ಟರ್ ನ ಕಾರ್ಯದರ್ಶಿಯಾಗಿರುವ ಸಾಬಿರ್  ಅಲಿ  “ದಿ ಡಿಸ್ಟೆನ್ಸ್” ಸ್ಮರಣ ಸಂಚಿಕೆಯ ಬಗ್ಗೆ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಅಭಾದ ಕಿಂಗ್ ಖಾಲಿದ್ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳಾದ ಡಾ. ಲುಕ್ಮಾನ್ ಹಾಗೂ ಡಾ. ಅಬ್ದುಲ್ ಖಾದರ್, ಖಮಿಶ್ ಮುಷೈತ್ ನ ಅಲ್ ಜುನೂಬ್ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾಗಿರುವ ಸಿದ್ದೀಕ್, ಕೌನ್ಸಿಲರ್ ಆಗಿರುವ ಶ್ರೀಮತಿ ತೌಕೀರ್ ಇಕ್ಬಾಲ್, ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ಮೆಹರ್ ಫಾತಿಮ, ಇಂಡಿಯನ್ ಸೋಶಿಯಲ್ ಫೋರಂ ಅಸೀರ್ ಕೇಂದ್ರೀಯ ಸಮಿತಿಯ ಉಪಾಧ್ಯಕ್ಷರಾಗಿರುವ ಹನೀಫ್ ಮಂಜೇಶ್ವರ, ಮಾದ್ಯಮಂ ಮತ್ತು ಮೀಡಿಯಾ ಒನ್ ವರದಿಗಾರರಾಗಿರುವ ಮುಜೀಬ್, ಅಭಾದಲ್ಲಿ ಉದ್ಯಮಿಯಾಗಿರುವ ಮುಹಮ್ಮದ್ ರಫಿ ಮತ್ತು ಐ.ಎಫ್.ಎಫ್ ಅಸೀರ್ ರೀಜನಲ್ ನ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಕೋವಿಡ್ ಸಮಯದ ಸಂದಿಗ್ಧ ಪರಿಸ್ಥಿತಿಯಲ್ಲಿ ಐ.ಎಫ್.ಎಫ್ ಮಾಡಿದ ಆಹಾರದ ಕಿಟ್ ವಿತರಣೆ, ರಕ್ತದಾನ, ಕೌನ್ಸೆಲಿಂಗ್ ಕಾರ್ಯಕ್ರಮದಂತಹ ಸಾಮಾಜಿಕ ಸೇವೆಗಳ ಬಗ್ಗೆ ಹಾಗೂ ಹಲವಾರು ವರ್ಷಗಳಿಂದ ಅನಿವಾಸಿ ಭಾರತೀಯರಿಗೆ ಆಶಾಕಿರಣವಾಗಿ ಮೂಡಿ ಬಂದಿರುವ ಐ.ಎಫ್.ಎಫ್ ನ ಕಾರ್ಯಚಟುವಟಿಕೆಗಳ ಬಗ್ಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲಾ ಗಣ್ಯರು ಪ್ರಶಂಸಿದರು.

ಕಾರ್ಯಕ್ರಮದಲ್ಲಿ IFF ಕಾರ್ಯಚಟುವಟಿಕೆಗಳ ಕುರಿತು ಸಲೀಮ್ GK ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. IFF ಜಿಝಾನ್ ಕರ್ನಾಟಕ ಚಾಪ್ಟರ್ ಕಾರ್ಯದರ್ಶಿಯವರಾದ ಹನೀಫ್ ಜೋಕಟ್ಟೆಯವರು  ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಮಾರೋಪ ಹಾಗೂ ಧನ್ಯವಾದ ಕಾರ್ಯಕ್ರಮವನ್ನು ಐ.ಎಫ್.ಎಫ್ ಅಸೀರ್ ರೀಜನ್ ಕಾರ್ಯದರ್ಶಿಯಾಗಿರುವ  ಶರಫುದ್ದೀನ್ ರವರು ನೆರವೇರಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!