ಸರಕಾರದ ಜನವಿರೋಧಿ ನೀತಿಗಳ ಪರವಾಗಿ ಮಾತನಾಡುವ ಸೂಫಿಗಳು ಸೂಫಿಗಳೇ ಅಲ್ಲ: ಸಯ್ಯದ್ ಸರ್ವರ್ ಜಿಸ್ತಿ

Prasthutha: April 5, 2021

ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತುವ ಪ್ರತಿಯೊಬ್ಬರೂ ಜೊತೆಯಾಗುವಂತೆ ಕರೆ

ಬೆಂಗಳೂರು: ಕೇಂದ್ರ ಸರಕಾರ ನಿರಂತರವಾಗಿ ಜನವಿರೋಧಿ ನೀತಿಗಳನ್ನು ಮತ್ತು ಸಂವಿಧಾನ ವಿರೋಧಿ ಕ್ರಮಗಳನ್ನು ಅನುಸರಿಸುತ್ತಾ ಒಂದು ಸಮುದಾಯದ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಾ ಬಂದಿದೆ. ಸರಕಾರದ ಈ ಜನವಿರೋಧಿ ನೀತಿಯ ಪರವಾಗಿ ಮಾತನಾಡುತ್ತಿರುವ ಕೆಲವು ಸೂಫಿ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿರುವವರು ಸೂಫಿಗಳೇ ಅಲ್ಲ ಎಂದು ಅಜ್ಮೀರ್ ಖ್ವಾಜಾ ಮುಹಿನುದ್ದೀನ್ ದರ್ಗಾ ಇದರ ಮುಖ್ಯಸ್ಥರಾಗಿರುವ ಸಯ್ಯದ್ ಸರ್ವರ್ ಜಿಸ್ತಿ ಹೇಳಿದ್ದಾರೆ.

ಅವರು ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ ನಲ್ಲಿ “ಜಾಮಾತೆ ಸೂಫಿಯಾ ಹಿಂದ್” ಸೂಫಿ ಸಂಘಟನೆಯನ್ನು ಉದ್ಘಾಟಿಸಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಸದ್ಯ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಪ್ರಯತ್ನವು ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ದೇಶದಲ್ಲಿ ಪ್ರೀತಿ, ಸಹಬಾಳ್ವೆ, ಸಹೋದರತೆಗಾಗಿ ಜಾಮಾತೆ ಸೂಫಿಯಾ ಹಿಂದ್ ಸ್ಥಾಪಿಸಿದ್ದೇವೆ. ದ್ವೇಷವು ಈ ಸಮಾಜವನ್ನು ಅರಾಜಕತೆಗೆ ಕೊಂಡೊಯ್ಯತ್ತದೆ ಎಂದು ಹೇಳಿದ್ದಾರೆ.

CAA, NRC, ತ್ರಿವಳಿ ತಲಾಖ್ ಮತ್ತಿತರ ಜನವಿರೋಧಿ ಕಾನೂನುಗಳನ್ನು ತಂದು ಅಲ್ಪಸಂಖ್ಯಾತರನ್ನು ಮತ್ತು ಹಿಂದುಳಿದ ವರ್ಗವನ್ನು ದಮನಿಸುವ ಅ ಹೆಸರಿನಲ್ಲಿ ದೌರ್ಜನ್ಯವೆಸಗುವ ಪ್ರಕ್ರಿಯೆಗಳು ನಡೆಯುತ್ತಿದೆ. ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಕೆಲವು ಸೂಫಿ ಹೆಸರಿನಲ್ಲಿ ಸರಕಾರವನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.‌ಅವರು ಸೂಫಿಗಳಲ್ಲ ಬದಲಾಗಿ ಕೂಫಿಗಳು ಎಂದು ಸಯ್ಯದ್ ಸರ್ವರ್ ಜಿಸ್ತಿ ಹೇಳಿದ್ದಾರೆ.

ಭಾರತದ ಸಂವಿಧಾನವನ್ನು ಉಳಿಸುವ ಅಗತ್ಯತೆ ನಮ್ಮ ಮುಂದಿದೆ.‌ ಹಾಗಾಗಿ ಸಂವಿಧಾನವನ್ನು ಉಳಿಸುವ, ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತುವ ಪ್ರತಿಯೊಬ್ಬರೂ ಜೊತೆಯಾಗಬೇಕೆಂದು ಅವರು ಕರೆ ನೀಡಿದ್ದಾರೆ.

ಜಾತ್ಯಾತೀತತೆಯ ಪರ ಮಾತನಾಡುವ ಪ್ರತಿಯೊಬ್ಬರೊಂದಿಗೂ ನಾವು ಜೊತೆ ಸೇರಲು ಇಚ್ಚಿಸುತ್ತೇವೆ. ಅದು ಪಾಪ್ಯುಲರ್ ಫ್ರಂಟ್, ಉಲೆಮಾ ಹಿಂದ್, ಜಾಮಾತೇ ಇಸ್ಲಾಮಿ ಹಿಂದ್ ಯಾವುದೇ ಆದರೂ ನಾವು ಅವರ ಜೊತೆ ನಿಲ್ಲುತ್ತೇವೆ. ಯಾಕೆಂದರೆ ಅವರು ಈ ದೇಶದ ಉಳಿವಿಗಾಗಿ ಮಾತನಾಡುತ್ತಾರೆ ಮತ್ತು ಅದಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ ಎಂದು ಹೇಳಿದ್ದಾರೆ‌.‌

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!