ಉಡುಪಿ ಪ್ರಕರಣ | ಪೊಲೀಸರ ಮೇಲೆ ನಂಬಿಕೆಯಿಲ್ಲದಿದ್ದರೆ ಕಲ್ಲಡ್ಕ ಭಟ್ಟರಿಂದ ತನಿಖೆ ಮಾಡಿಸಿ: ರಮೇಶ್ ಕಾಂಚನ್

Prasthutha|

ಉಡುಪಿ: ಕಾಲೇಜೊಂದರಲ್ಲಿ ವೀಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮೇಲೆ ನಂಬಿಕೆಯಿಲ್ಲದಿದ್ದರೆ ಕಲ್ಲಡ್ಕ ಭಟ್ಟರಿಂದ ತನಿಖೆ ಮಾಡಿಸಿ ಎಂದು ಉಡುಪಿ ಕಾಂಗ್ರೆಸ್ ನಾಯಕ ರಮೇಶ್ ಕಾಂಚನ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

- Advertisement -


ಇಂದು ಉಡುಪಿಯಲ್ಲಿ ಮಣಿಪುರ ಹಿಂಸಾಚಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, “ಯಶ್ಪಾಲ್ ಸುವರ್ಣ ಮತ್ತು ಬಿಜೆಪಿಯವರಿಗೆ ಪೊಲೀಸ್ ತನಿಖೆಯಲ್ಲಿ ನಂಬಿಕೆಯಿಲ್ಲದೆ ಹೋದರೆ ಅವರು ಕಲ್ಲಡ್ಕ ಪ್ರಭಾಕರ ಭಟ್ಟರಿಂದ ತನಿಖೆ ಮಾಡಿಸಲಿ ಎಂದು ಕಿಡಿಕಾರಿದರು.


ಕಾಂಗ್ರೆಸ್ಸಿನ ಪ್ರಮುಖ ನಾಯಕರು ಭಾಗವಹಿಸಿದ್ದ ಈ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಜಕೀಯಕ್ಕಾಗಿ ಸಣ್ಣ ಮಕ್ಕಳ ಭವಿಷ್ಯವನ್ನು ಬಲಿ ಕೊಡಲು ನಿಂತಿದೆ ಎಂದರು.

Join Whatsapp