ವಿಧಾನಸೌಧದ ಬಳಿ ಡ್ರೋನ್ ಹಾರಾಟಕ್ಕೆ ಯತ್ನ: ಇಬ್ಬರು ಯುವಕರ ವಿರುದ್ಧ FIR​ ದಾಖಲು

Prasthutha|

ಬೆಂಗಳೂರು: ವಿಧಾನಸೌಧದ ಪೂರ್ವ ದ್ವಾರದ ಬಳಿ ಇಂದು ಬೆಳಿಗ್ಗೆ ಡ್ರೋನ್ ಹಾರಾಟಕ್ಕೆ ಯತ್ನಿಸಿದ್ದ ಇಬ್ಬರು ಇವೆಂಟ್ ಮ್ಯಾನೇಜ್​ಮೆಂಟ್ ಯುವಕರ ವಿರುದ್ಧ ಅತಿಕ್ರಮ ಪ್ರವೇಶ ಮತ್ತು ನಿರ್ಲಕ್ಷ್ಯ ಹಿ‌ನ್ನೆಲೆ ವಿಧಾನಸೌಧ ಠಾಣೆ ಪೊಲೀಸರು FIR ದಾಖಲಿಸಿದ್ದಾರೆ.

- Advertisement -

ಅರುಣ್​ ಮತ್ತು ವಿನೋದ್ ವಶಕ್ಕೆ ಪಡೆಯಲಾಗಿದ್ದ ಯುವಕರು. ಸದ್ಯ ಇಬ್ಬರಿಗೂ ಸ್ಟೇಷನ್​ ಬೇಲ್​​ ನೀಡಿ ಕಳುಹಿಸಲಾಗಿದೆ.

ಡ್ರೋನ್ ಹಾರಿಸುವುದು ನಿರ್ಬಂಧಿಸಿರುವ ವಿಚಾರ ತಿಳಿಯದೆ ಹಾರಿಸಲು ಯತ್ನಿಸಿದ್ದಾಗಿ ಪೊಲೀಸ್​​ ವಿಚಾರಣೆಯಲ್ಲಿ ತಿಳಿದುಬಂದಿದೆ. ಖಾಸಗಿ ಕಂಪನಿಯೊಂದರ 15 ವರ್ಷಗಳ ಸಂಭ್ರಮಾಚರಣೆ ಹಿನ್ನೆಲೆ ವಿಧಾನಸೌಧದ ವಿಡಿಯೋ ಚಿತ್ರೀಕರಣಕ್ಕೆ ಬಂದಿದ್ದರು.

- Advertisement -

250 ಗ್ರಾಂ ಗಿಂತ ಕಡಿಮೆ ಅಥವಾ ಸಮ ತೂಕದ (ಯಾವುದೇ ಪರವಾನಗಿ ಅಗತ್ಯವಿಲ್ಲದ) ನ್ಯಾನೊ ಡ್ರೋನ್​ನನ್ನು ನೆಲದಿಂದ 50 ಅಡಿಗಿಂತ ಹೆಚ್ಚು ಅಂತರದಲ್ಲಿ ಹಾರಾಟ ನಡೆಸಬಹುದಾ ಎಂದು ಮೊದಲು ಖಚಿತಪಡಿಸಿಕೊಳ್ಳಬೇಕು. ಅದೇ ರೀತಿಯಾಗಿ ನೀವು ವಿಮಾನ ನಿಲ್ದಾಣ ಅಥವಾ ಇತರೆ ಸೂಕ್ಷ್ಮ ನಿಯಂತ್ರಿತ ಪ್ರದೇಶಗಳಲ್ಲಿ ನ್ಯಾನೊ ಡ್ರೋನ್​ಗಳನ್ನು ಹಾರಾಟ ನಡೆಸುವ ಮುನ್ನ ಸಂಬಂಧಪಟ್ಟವರಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದು ರಕ್ಷಣಾ ವಿಶ್ಲೇಷಕ ಗಿರೀಶ್​ ಲಿಂಗಣ್ಣ ಅವರು ಅಭಿಪ್ರಾಯ ಪಟ್ಟಿದ್ದಾರೆ.

250 ಗ್ರಾಂ ಗಿಂತ ಹೆಚ್ಚು ತೂಕವಿದ್ದು, ಆದರೆ 2 ಕಿಲೋಗ್ರಾಂಗಳಿಗಿಂತ ಕಡಿಮೆ ಅಥವಾ ಸಮ ತೂಕದ ಮೈಕ್ರೋ ಡ್ರೋನ್​​ಗಳನ್ನು ಯಾವುದೇ ಪರವಾನಗಿ ಅಗತ್ಯವಿಲ್ಲದೇ ವಾಣಿಜ್ಯೇತರ ಕಾರ್ಯಕ್ಕೆ ಮಾತ್ರ ಬಳಕೆ ಮಾಡಬಹುದಾಗಿದೆ.

Join Whatsapp