ತಾಕತ್, ಧಮ್ ಇದ್ರೆ ಸುಪ್ರೀಂ ಕೋರ್ಟ್ ಮುಂದೆ ನೀರು ಬೀಡಲ್ಲ ಎಂಬ ವಾದ ಮಂಡಿಸಲಿ: ಬೊಮ್ಮಾಯಿ

Prasthutha|

ಬೆಂಗಳೂರು: ಆರಂಭದಲ್ಲಿ ಸಿಎಂ ನೀರು ಬಿಡಲ್ಲ ಅಂದ್ರು, ಆಮೇಲೆ ನೀರು ಬಿಡ್ತೀವಿ ಅಂತಾರೆ. ಇದು ಊಸರವಳ್ಳಿ ಸರ್ಕಾರ ಅಂತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಬಿಡುವ ವಿಚಾರದಲ್ಲಿ ತಮಿಳುನಾಡಿನ ಪ್ರಭಾವ ರಾಜ್ಯ ಸರ್ಕಾರದ ಮೇಲೆ ಇದ್ದಂಗೆ ಇದೆ. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆಗಿಲ್ಲ. ಅದಕ್ಕಿಂತ ಮುಂಚೇನೇ ಇವರು ನೀರು ಬಿಡ್ತಾರೆ ಅಂದರೆ ಹೇಗೆ? ಕಾವೇರಿ ಜಲಾನಯನ ಜನರಿಗೆ ಮೋಸ ಮಾಡಿದಂತೆ ಆಗುತ್ತೆ. ಸರ್ವಪಕ್ಷ ಸಭೆಯಲ್ಲಿ ನಮ್ಮಲ್ಲೇ ನೀರಿಲ್ಲ ಅಂತ ಹೇಳಿದ್ರು. ಆಗಾಗ್ಗೆ ತನ್ನ ನಿರ್ಧಾರ ಬದಲಾವಣೆ ಮಾಡಿಕೊಳ್ಳುತ್ತಿದೆ. ನಿಜವಾಗಿಯೂ ತಾಕತ್, ಧಮ್ ಇದ್ರೆ ನೀರು ಬಿಡ್ತಿರಲಿಲ್ಲ. ತಾಕತ್, ಧಮ್ ಇದ್ರೆ ಸುಪ್ರೀಂ ಕೋರ್ಟ್ ಮುಂದೆ ನೀರು ಬೀಡಲ್ಲ ಎಂಬ ವಾದ ಮಂಡಿಸಲಿ ಎಂದು ಸವಾಲ್ ಹಾಕಿದ್ದಾರೆ.