ಅಲ್ಲಾಹ್, ಈಶ್ವರ, ಜೀಸಸ್ ದೇವರೆಂದು ಒಪ್ಪಿಕೊಂಡರೆ ಜಗತ್ತಿನಲ್ಲಿ ಸಂಘರ್ಷ ಇಲ್ಲ: ಸಿ.ಟಿ.ರವಿ

Prasthutha|

ಚಿಕ್ಕಮಗಳೂರು: ಅಲ್ಲಾ, ಈಶ್ವರ, ಜೀಸಸ್ ದೇವರೆಂದು ಒಪ್ಪಿಕೊಂಡರೆ ಜಗತ್ತಿನಲ್ಲಿ ಸಂಘರ್ಷ ಇರುವುದಿಲ್ಲ ಎಂದು  ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸರ್ವಧರ್ಮ ಸಮನ್ವಯತೆಯ ಪಾಠ ಮಾಡಿದ್ದಾರೆ.

- Advertisement -

ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಅಲ್ಲಾಹ್, ಈಶ್ವರ, ಜೀಸಸ್ ದೇವರೆಂದು ಒಪ್ಪಿಕೊಂಡರೆ ಜಗತ್ತಿನಲ್ಲಿ ಸಂಘರ್ಷ ಇರುವುದಿಲ್ಲ. ಒಬ್ಬ ಹಿಂದೂವಾಗಿ ಜೀಸಸ್, ಅಲ್ಲಾನನ್ನು ದೇವರು ಎಂದು ಒಪ್ಪಿಕೊಳ್ಳಬಹುದು. ಹಿಂದೂವಾಗಿ ಚರ್ಚ್, ಮಸೀದಿಗೂ ಕೂಡ ಹೋಗಬಹುದು  ಎಂದಿದ್ದಾರೆ.

ಜಗತ್ತಿನಲ್ಲಿ ಶಾಂತಿ ನೆಲೆಸಲು ಇರುವ ಅಡೆತಡೆಗಳನ್ನು ನಿವಾರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಆಲೋಚನೆ ಮಾಡಿದರೆ ಜಗತ್ತು ಸುಖವಾಗಿರುತ್ತದೆ ಎಂದು ಹೇಳಿದರು.

- Advertisement -

Join Whatsapp