ಒಮಿಕ್ರಾನ್ ಭೀತಿ: ಸಾಮಾಜಿಕ ಕಾರ್ಯಕ್ರಮಗಳಿಗೆ ಯುಎಇ ನಿರ್ಬಂಧ

Prasthutha|

ರಿಯಾದ್: ಅತ್ಯಂತ ವೇಗವಾಗಿ ಹರಡುತ್ತಿರುವ ರೂಪಂತರಿ ಓಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಯುಎಇ ಪ್ರಾಧಿಕಾರ ನೂತನ ಮಾರ್ಗಸೂಚಿಯನ್ವಯ ಸೋಮವಾರದಿಂದ ಎಲ್ಲಾ ವಿಧದ ಸಾಮಾಜಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಅಬುಧಾಬಿ ತುರ್ತುಪರಿಸ್ಥಿತಿ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಸಮಿತಿಯು “ ಸಾಮಾಜಿಕ ಕಾರ್ಯಕ್ರಮಗಳಾದ ಮದುವೆ, ಅಂತ್ಯಕ್ರಿಯೆ ಮತ್ತು ಕುಟುಂಬ ಸಮ್ಮಿಲನಗಳ ಮೇಲೆ ಶೇಕಡಾ 60 ರಷ್ಟು ನಿರ್ಬಂಧ ವಿಧಿಸಿರುವುದಾಗಿ ತಿಳಿಸಿದೆ.

ನೂತನ ಮಾರ್ಗಸೂಚಿಯ ಪ್ರಕಾರ ಒಳಾಂಗಣ ಕಾರ್ಯಕ್ರಮಗಳಿಗೆ 50 ಮಂದಿ, ಹೊರಾಂಗಣ ಮತ್ತು ಬಯಲು ಕಾರ್ಯಕ್ರಮಗಳಿಗೆ 150 ಮಂದಿಯನ್ನು ಮೀರದಂತೆ ಅನುಮತಿ ನೀಡಲಾಗಿದೆ.

- Advertisement -

ಮಾತ್ರವಲ್ಲ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಆನ್ ಲೈನ್ ಆ್ಯಪ್ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿರಬೇಕು. 48 ಗಂಟೆಗಳ ಮೊದಲು ನೆಗೆಟಿವ್ RTPCR ವರದಿ ಸಲ್ಲಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಮಾರ್ಗಸೂಚಿಯಲ್ಲಿ ಆದೇಶಿಸಿದೆ.

Join Whatsapp