ಯೋಗಿ ಮತ್ತೆ ಅಧಿಕಾರಕ್ಕೆ ಬಂದರೆ ಉವೈಸಿ ಜನಿವಾರ ಧರಿಸುತ್ತಾರೆ: ಭೂಪೇಂದ್ರ ಸಿಂಗ್

Prasthutha|

ಲಕ್ನೋ:  ಆದಿತ್ಯನಾಥ್ ಸರ್ಕಾರ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಉವೈಸಿ ಹಿಂದೂಗಳ ಜನಿವಾರವನ್ನು ಧರಿಸುತ್ತಾರೆ ಎಂದು ಉತ್ತರ ಪ್ರದೇಶ ಪಂಚಾಯತ್‌ ರಾಜ್ ಸಚಿವ ಭೂಪೇಂದ್ರ ಸಿಂಗ್ ಚೌಧರಿ ಹೇಳಿದ್ದಾರೆ.

- Advertisement -

ಶಾಮ್ಲಿಯಲ್ಲಿ ನಡೆದ ಯುವಜನರ ಸಮಾವೇಶದಲ್ಲಿ ಮಾತನಾಡಿದ ಅವರು, ಆದಿತ್ಯನಾಥನ್ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಉವೈಸಿ ಜನಿವಾರ ಧರಿಸುತ್ತಾರೆ ಮತ್ತು ಭಗವಾನ್ ರಾಮನ ಹೆಸರನ್ನು ಜಪಿಸುತ್ತಾರೆ ಎಂದಿದ್ದಾರೆ. ಬಿಜೆಪಿಯ ಸಿದ್ಧಾಂತವನ್ನು ಬಲಪಡಿಸುವ ಮಧ್ಯೆ, ರಾಹುಲ್ ಗಾಂಧಿ ಅವರು ಜನಿವಾರವನ್ನು ಧರಿಸಿದ್ದು, ಅಖಿಲೇಶ್ ಯಾದವ್ ಹನುಮಾನ್ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಾಯಕರ ಪಟ್ಟಿಯಲ್ಲಿ ಈ ಹೇಳಿಕೆ ಸೇರುತ್ತದೆ ಎಂದು ಚೌಧರಿ ಹೇಳಿದ್ದಾರೆ.

Join Whatsapp