‘ನಿಮ್ಮ ಸ್ವಂತ ಯಂತ್ರಕ್ಕೆ ಎಣ್ಣೆ ಹಚ್ಚಿ, ಇದು ನಮ್ಮ ದೇಶ , ನಮ್ಮ ಆಂತರಿಕ ವಿಚಾರ’; ಪಾಕಿಸ್ತಾನಕ್ಕೆ ಖಡಕ್ ಪ್ರತಿಕ್ರಿಯೆ ಕೊಟ್ಟ ಅಸಾದುದ್ದೀನ್ ಉವೈಸಿ

Prasthutha|

ಲಕ್ನೋ; ಕರ್ನಾಟಕದ ಕೆಲ ಕಾಲೇಜುಗಳಲ್ಲಿ ಭುಗಿಲೆದ್ದಿರುವ ಶಿರವಸ್ತ್ರ- ಕೇಸರಿ ಶಾಲು ವಿವಾದದಲ್ಲಿ ಹೇಳಿಕೆಗಳನ್ನು ನೀಡುತ್ತಿರುವ ಪಾಕಿಸ್ತಾನದ ರಾಜಕಾರಣಿಗಳಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
“ಪಾಕಿಸ್ತಾನದಲ್ಲಿ ಹೆಣ್ಣುಮಗಳು ಮಲಾಲಾ ಮೇಲೆ ದಾಳಿ ನಡೆಸಲಾಯಿತು. ನೆಮ್ಮದಿಯ ಬಾಳು ಸಾದ್ಯವಿಲ್ಲ ಎಂದು ಆಕೆ ಪಾಕಿಸ್ತಾನವನ್ನು ತೊರೆಯಬೇಕಾಯಿತು. ಪಾಕಿಸ್ತಾನದ ಸಂವಿಧಾನವು ಮುಸ್ಲಿಮೇತರರಿಗೆ ಪ್ರಧಾನಿಯಾಗಲು ಅವಕಾಶ ನೀಡುವುದಿಲ್ಲ. ಪಾಕಿಸ್ತಾನಕ್ಕೆ ನನ್ನ ಸಲಹೆ ಏನೆಂದರೆ ಇದರ್ ಮತ್ ದೇಖೋ [ ಈ ಕಡೆ ನೋಡಬೇಡಿ] ನಿಮ್ಮ ಹಿತ್ತಲಲ್ಲೇ ಹಲವಾರು ಸಮಸ್ಯೆಗಳಿವೆ. ಅದನ್ನು ಸರಿಪಡಿಸಲು ನೋಡಿ, ಬಲೂಚ್ ಪ್ರದೇಶವನ್ನು ನೋಡಿ. ಭಾರತ ದೇಶ ನಮ್ಮ ದೇಶ, ಇದು ನಮ್ಮ ಆಂತರಿಕ ವಿಚಾರ, ನಮ್ಮ ಸಮಸ್ಯೆಗಳಲ್ಲಿ ನಿಮ್ಮ ಮೂಗು ಹಾಕಬೇಡಿ, ನಿಮ್ಮ ಮೂಗಿಗೆ ನೋವಾಗುತ್ತದೆ” ಎಂದು ಉವೈಸಿ ಪಾಕಿಸ್ತಾನದ ನಾಯಕರಿಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

ಶಿರವಸ್ತ್ರ- ಕೇಸರಿ ಶಾಲು ವಿವಾದದಲ್ಲಿ ಪ್ರತಿಕ್ರಿಯಿಸಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ಹಿಜಾಬ್ ವಿವಾದದ ಮೂಲಕ ಮುಸ್ಲಿಂ ಹೆಣ್ಷು ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಹಿಜಾಬ್ ಧರಿಸಿದ ಕಾರಣದಿಂದಾಗಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಭಯಭೀತಗೊಳಿಸಿ, ಅವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದ್ದರು.

ಮತ್ತೊಂದೆಡೆ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಸಿ.ಎಚ್. ​​ಫವಾದ್ ಹುಸೇನ್,
ಭಾರತದಲ್ಲಿ ಪರಿಸ್ಥಿತಿಯನ್ನು ‘ಭಯಾನಕ’ ಎಂದು ಬಣ್ಣಿಸಿದ್ದಾರೆ. “ಅಸ್ಥಿರ ನಾಯಕತ್ವದಲ್ಲಿ ಭಾರತೀಯ ಸಮಾಜವು ಸೂಪರ್ ಸ್ಪೀಡ್‌ನಿಂದ ಕುಸಿಯುತ್ತಿದೆ. ಹಿಜಾಬ್ ಧರಿಸುವುದು ವೈಯಕ್ತಿಕ ಆಯ್ಕೆಯಾಗಿದೆ ಎಂದಿದ್ದಾರೆ.

Join Whatsapp