ಐಸಿಸಿ T-20 ವಿಶ್ವಕಪ್; ಮೂರನೇ ಪಂದ್ಯದಲ್ಲೂ ಟಾಸ್ ಸೋತ ಕೊಹ್ಲಿ; ಕಿಶನ್ ಬದಲು ಸೂರ್ಯಕುಮಾರ್

Prasthutha|

ಅಬುಧಾಬಿ; ಐಸಿಸಿ ಟಿ- 20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ, ಟೀಮ್ ಇಂಡಿಯಾವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿದೆ. ಇದರೊಂದಿಗೆ ಮೂರನೇ ಪಂದ್ಯದಲ್ಲೂ ಟಾಸ್ ಭಾರತಕ್ಕೆ ಕೈ ಕೊಟ್ಟಿದೆ.

- Advertisement -

ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಟಾಸ್ ಸೋತಿದ್ದ ಭಾರತ, ಆ ಪಂದ್ಯಗಳಲ್ಲೂ ಹೀನಾಯವಾಗಿ ಸೋಲು ಕಂಡಿತ್ತು.
ಅಫ್ಘಾನಿಸ್ತಾನ ವಿರುದ್ಧದ ಬುಧವಾರದ ಪಂದ್ಯದಲ್ಲಿ ಭಾರತ ಭಾರಿ ಅಂತರದಲ್ಲಿ ಪಂದ್ಯ ಗೆಲ್ಲ ಬೇಕಾದ ಒತ್ತಡದಲ್ಲಿದೆ.
ಮೊದಲ ಪಂದ್ಯ ಸೋತ ಬಳಿಕ ತಂಡದಲ್ಲಿ 2 ಬದಲಾವಣೆ ಮಾಡಲಾಯಿತಾದರೂ ಸೋಲು ತಪ್ಪಿಸಲಾಗಲಿರಲಿಲ್ಲ.
ಹೀಗಾಗಿ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಪಂದ್ಯದಲ್ಲೂ ಮತ್ತೊಮ್ಮೆ 2 ತಂಡದಲ್ಲಿ ಬದಲಾವಣೆ ಮಾಡಲಾಗಿದೆ.

ಕಳೆದ ಪಂದ್ಯದಲ್ಲಿ ಆಡಿದ್ದ ಇಶಾನ್ ಕಿಶನ್ ಬದಲು ಮತ್ತೊಮ್ಮೆ ಸೂರ್ಯಕುಮಾರ್ ಯಾದವ್’ಗೆ ಮಣೆ ಹಾಕಲಾಗಿದೆ. ಬೌಲಿಂಗ್ ವಿಭಾಗದಲ್ಲಿ
ಯುವ ಸ್ಪಿನ್ನರ್ ವರುಣ್ ಚಕ್ರವರ್ತಿ ಎರಡೂ ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿಲ್ಲ. ಹೀಗಾಗಿ ವರುಣ್ ಬದಲಿಗೆ ಅನುಭವಿ ಸ್ಪಿನ್ನರ್ ಅಶ್ವಿನ್ ಸ್ಥಾನ‌ ಪಡೆದಿದ್ದಾರೆ.

- Advertisement -

ಸೆಮಿಫೈನಲ್ ರೇಸ್’ನಿಂದ ಬಹುತೇಕ ಹೊರನಡೆದಿರುವ ಟೀಮ್ ಇಂಡಿಯಾ ಮುಂದಿನ ಮೂರು ಪಂದ್ಯಗಳಲ್ಲಿ ಭಾರಿ ಅಂತರದಲ್ಲಿ ಗೆಲ್ಲಬೇಕಾದ ಒತ್ತಡದಲ್ಲಿದೆ. ಹಾಗಾದಲ್ಲಿ ರನ್’ರೇಟ್ ಆಧಾರದ ಮೇಲೆ ಸೆಮಿ ಫೈನಲ್ ಲೆಕ್ಕಾಚಾರ ನಡೆಯಲಿದೆ. ಇದು ಸಾಧ್ಯವಾಗಬೇಕಾದರೆ ನ್ಯೂಜಿಲೆಂಡ್ ತಂಡ ತನ್ನ ಮುಂದಿನ ಪಂದ್ಯಗಳಲ್ಲಿ ಸೋಲು ಕಾಣಬೇಕು. ಹೀಗಾಗಿ ಟೀಮ್ ಇಂಡಿಯಾ ಭಾರಿ ಗೆಲುವು ಕಂಡರೂ ಸಹ ಉಳಿದ ತಂಡಗಳ ಫಲಿತಾಂಶವನ್ನೂ ಆಶ್ರಯಿಸಬೇಕಾಗಿದೆ.

ಗ್ರೂಪ್-2ರಲ್ಲಿ ಆಡಿರುವ 4 ಪಂದ್ಯಗಳಲ್ಲೂ ಜಯ ಕಂಡಿರುವ ಪಾಕಿಸ್ತಾನ ಸೆಮಿಫೈನಲ್ ಟಿಕೆಟ್ ಪಡೆದಿದೆ. 3 ಪಂದ್ಯಗಳಲ್ಲಿ 2 ರಲ್ಲಿ ಗೆದ್ದಿರುವ ಅಫ್ಘಾನಿಸ್ತಾನ, ಇಂದಿನ ಪಂದ್ಯವನ್ನು ಗೆದ್ದರೆ ನ್ಯೂಜಿಲೆಂಡ್ ಜೊತೆ ಸೆಮಿ ಟಿಕೆಟ್’ಗಾಗಿ ತೀವ್ರ ಪೈಪೋಟಿ ಏರ್ಪಡಲಿದೆ.

Join Whatsapp