ರಾಹುಲ್ ಗಾಂಧಿ ಜೊತೆ ಸಂವಾದ ನಡೆಸಿದವರನ್ನು ವಿಚಾರಣೆ ನಡೆಸುತ್ತಿರುವ ಐಬಿ: ಜೈರಾಮ್ ರಮೇಶ್ ಆರೋಪ

Prasthutha|

ನವದೆಹಲಿ: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸಿದವರನ್ನು ಗುಪ್ತಚರ ಇಲಾಖೆ ಪ್ರಶ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

- Advertisement -

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ, ಇಬ್ಬರು ನಾಯಕರು “ನರ್ವಸ್” ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಕುರಿತು ಟ್ವೀಟ್ ಮಾಡಿದ ಅವರು, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ ಅನೇಕ ಜನರನ್ನು ಐಬಿ ಪ್ರಶ್ನಿಸುತ್ತಿದೆ. ಪತ್ತೆದಾರರು ಎಲ್ಲಾ ರೀತಿಯ ಪ್ರಶ್ನೆಗಳನ್ನು ಮತ್ತು ಅವರಿಗೆ ಸಲ್ಲಿಸಿದ ಜ್ಞಾಪಕ ಪತ್ರದ ಪ್ರತಿಗಳನ್ನು ಕೇಳುತ್ತಿದ್ದಾರೆ. ಯಾತ್ರೆಯ ಬಗ್ಗೆ ಏನೂ ರಹಸ್ಯವಿಲ್ಲ ಆದರೆ ಸ್ಪಷ್ಟವಾಗಿ, ಮೋದಿ ಮತ್ತು ಶಾ ಭಯಭೀತರಾಗಿದ್ದಾರೆ ಎಂದು ಹೇಳಿದ್ದಾರೆ.

Join Whatsapp