ನೇಪಾಳದ ಪ್ರಧಾನಿಯಾಗಿ ‘ಪುಷ್ಪ ಕಮಲ್ ದಹಲ್ ಪ್ರಚಂಡ’ ನೇಮಕ 

Prasthutha|

ಕಠ್ಮಂಡು: ನೇಪಾಳ ಅಧ್ಯಕ್ಷ ಬಿಧ್ಯಾ ದೇವಿ ಭಂಡಾರಿ ಅವರು ಭಾನುವಾರ ಸಿಪಿಎನ್-ಮಾವೋವಾದಿ ಸೆಂಟರ್(ಸಿಪಿಎನ್-ಎಂಸಿ) ಅಧ್ಯಕ್ಷ ಪುಷ್ಪ ಕಮಲ್ ದಹಲ್ ‘ಪ್ರಚಂಡ’  ಅವರನ್ನು ಹಿಮಾಲಯ ರಾಷ್ಟ್ರದ ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ.

- Advertisement -

ದಹಲ್ ಅವರು ಸೋಮವಾರ ಸಂಜೆ 4 ಗಂಟೆಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸಿತಾಲ್ ನಿವಾಸ್ ನಲ್ಲಿರುವ ರಾಷ್ಟ್ರಪತಿಗಳ ಕಚೇರಿಯಿಂದ ಬಂದ ಪತ್ರದಲ್ಲಿ ತಿಳಿಸಲಾಗಿದೆ.

ಇದಕ್ಕೂ ಮೊದಲು ಪುಷ್ಪ ಕಮಲ್ ದಹಲ್ ನೇಪಾಳದ ಅಧ್ಯಕ್ಷರಿಗೆ ಮುಂದಿನ ಪ್ರಧಾನಿಯಾಗಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು.

- Advertisement -

ಪ್ರಚಂಡ ಅವರು ಪಕ್ಷೇತರ ಸಂಸದರು ಸೇರಿದಂತೆ 169 ಸಂಸದರ ಬೆಂಬಲವಿದೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದರು. ಈ ಹಿಂದೆ ಮಾಜಿ ಪ್ರಧಾನಿ ಕೆ. ಪಿ.ಶರ್ಮಾ ಓಲಿ ನೇತೃತ್ವದಲ್ಲಿ ಸಿಪಿಎನ್-ಯುಎಂಎಲ್, ಸಿಪಿಎನ್-ಎಂಸಿ, ರಾಷ್ಟ್ರೀಯ ಸ್ವತಂತ್ರ ಪಕ್ಷ(ಆರ್‌ಎಸ್‌ಪಿ) ಮತ್ತು ಇತರ ಸಣ್ಣ ಪಕ್ಷಗಳ ಮಹತ್ವದ ಸಭೆ ನಡೆಯಿತು. ಇದರಲ್ಲಿ ‘ಪ್ರಚಂಡ’ ನೇತೃತ್ವದಲ್ಲಿ ಸರ್ಕಾರ ರಚಿಸಲು ಒಮ್ಮತ ಅಭಿಪ್ರಾಯ ಕೇಳಿ ಬಂದಿದೆ.

ಇನ್ನು ಮುಂದಿನ ಎರಡೂವರೆ ವರ್ಷಗಳ ಕಾಲ ಪ್ರಚಂಡ ಅವರೇ ಪ್ರಧಾನಿಯಾಗಿಯೇ ಇರುತ್ತಾರೆ ಎಂದು ಮೈತ್ರಿಕೂಟದಲ್ಲಿ ಭಾಗವಾಗಿರುವ ಪಕ್ಷಗಳು ಹೇಳಿವೆ. ಇದರ ನಂತರ, ಸಿಪಿಎನ್-ಯುಎಂಎಲ್ ನಾಯಕ ಮಾಜಿ ಪ್ರಧಾನಿ ಓಲಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ.

Join Whatsapp