ಮಕ್ಕಳ ಹಕ್ಕುಗಳ ಹೋರಾಟಗಾರ, ‘ನಮ್ಮ ಭೂಮಿ’ ಸಂಸ್ಥಾಪಕ ದಾಮೋದರ ಆಚಾರ್ಯ ನಿಧನ

Prasthutha|

ಉಡುಪಿ : ಮಕ್ಕಳ ಹಕ್ಕುಗಳ ಹೋರಾಟಗಾರ ಹಾಗೂ ‘ನಮ್ಮ ಭೂಮಿ’ ಸಂಸ್ಥೆಯ ಸ್ಥಾಪಕರಾದ ಬಿ. ಧಾಮೋದರ ಆಚಾರ್ಯ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

- Advertisement -

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಹುಟ್ಟೂರು ಕುಂದಾಪುರದ ಬಸ್ರೂರಿನ ಮೂಡುಕೆರೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪಟ್ಟಣಕ್ಕೆ ವಲಸೆ ಬಂದು ಹೋಟೆಲ್ ಗಳಲ್ಲಿ ದುಡಿಯುತ್ತಿದ್ದ ಮಕ್ಕಳ ಹಕ್ಕುಗಳ ರಕ್ಷಣೆಗೆ ದಾಮೋದರ ಆಚಾರ್ಯ ಅವರು ಬೆಂಗಳೂರಿನಲ್ಲಿ ‘ಗ್ರಾಮಾಶ್ರಮ’ ಎಂಬ ಸಂಸ್ಥೆ ಆರಂಭಿಸಿದ್ದರು. ಕುಂದಾಪುರದ ಕನ್ಯಾನದಲ್ಲಿ ‘ನಮ್ಮ ಭೂಮಿ’ ಸಂಸ್ಥೆ ಹುಟ್ಟು ಹಾಕಿ ಬಡ ಹಾಗೂ ವಲಸೆ ಕಾರ್ಮಿಕರ ಮಕ್ಕಳಿಗೆ ಸ್ವಉದ್ಯೋಗ ತರಬೇತಿ ನೀಡುತ್ತಿದ್ದರು. ಇದುವರೆಗೂ ಈ ಸಂಸ್ಥೆಯಲ್ಲಿ 1,500ಕ್ಕೂ ಹೆಚ್ಚು ಮಕ್ಕಳು ತರಬೇತಿ ಪಡೆದು ಭವಿಷ್ಯ ರೂಪಿಸಿಕೊಂಡಿದ್ದಾರೆ.

- Advertisement -

ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ಕಾಯ್ದೆ ಕರಡು ಪ್ರತಿ ರಚನೆಯ ಹಿಂದೆ ದಾಮೋದರ ಆಚಾರ್ಯ ಅವರ ಶ್ರಮ ದೊಡ್ಡದಿದೆ.

Join Whatsapp