ಕೇಜ್ರಿವಾಲ್’ಗೆ ಬಿಗ್ ಶಾಕ್: ದೆಹಲಿ ಮದ್ಯ ಹಗರಣ ಆರೋಪಿಯಾಗಿ ‘ಆಮ್ ಆದ್ಮಿ’ ಸೇರಿಸಲು ಇಡಿ ಪ್ಲ್ಯಾನ್

Prasthutha|

ನವದೆಹಲಿ : ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಈ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷವನ್ನು (AAP) ಆರೋಪಿಯನ್ನಾಗಿ ಮಾಡಲು ಜಾರಿ ನಿರ್ದೇಶನಾಲಯ ಯೋಚಿಸುತ್ತಿದೆ ಎಂದು ಸುಪ್ರೀಂಕೋರ್ಟ್’ಗೆ ತಿಳಿಸಿದ್ದಾರೆ.

- Advertisement -

ಮದ್ಯ ನೀತಿಯಲ್ಲಿ ಹಗರಣ ನಡೆದಿದೆ ಎನ್ಬಲಾದ ಪ್ರಕರಣದಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಎಎಸ್ಜಿ ಎಸ್.ವಿ.ರಾಜು, ನಾವು ಆಮ್ ಆದ್ಮಿ ಪಕ್ಷವನ್ನ ಆರೋಪಿಯನ್ನಾಗಿ ಮಾಡಲು ಯೋಚಿಸುತ್ತಿದ್ದೇವೆ ಮತ್ತು ಸೆಕ್ಷನ್ 70ನ್ನು ಹೆಚ್ಚುವರಿಯಾಗಿ ತನಿಖೆ ಮಾಡಲು ಯೋಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Join Whatsapp