ಅದಾನಿ ಗುಂಪಿನ ಕಂಪೆನಿಗಳಿಗೆ ಸ್ಥಳೀಯ ಬ್ಯಾಂಕುಗಳು ಎಷ್ಟು ಹಣ ಕೊಟ್ಟಿವೆ: ಮಾಹಿತಿ ಕೇಳಿದ RBI

Prasthutha|

ಮುಂಬೈ: ಅದಾನಿ ಗುಂಪಿನ ಕಂಪೆನಿಗಳಿಗೆ ಸ್ಥಳೀಯ ಬ್ಯಾಂಕುಗಳು ಎಷ್ಟು ಸುರಿದಿವೆ ಎನ್ನುವ ಪೂರ್ಣ ಮಾಹಿತಿಯನ್ನು ನೀಡುವಂತೆ ಭಾರತೀಯ ಕೇಂದ್ರೀಯ ಬ್ಯಾಂಕು ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ವರದಿ ಕೇಳಿದೆ.

- Advertisement -


ಹಾಗೆಯೇ ಸರಕಾರದ ಇತರ ಬ್ಯಾಂಕುಗಳ ಮೂಲದ ಮಾಹಿತಿಯನ್ನು ಸಹ ಆರ್’ಬಿಐ ಕೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್’ಬಿಐ)ವನ್ನು ಈ ಬಗ್ಗೆ ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ ಅದು ಪ್ರತಿಕ್ರಿಯಿಸಲಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಲು ತಮಗೆ ಅಧಿಕಾರವಿಲ್ಲ ಎಂದು ಅದರ ಪ್ರತಿನಿಧಿಗಳು ಹೇಳಿದರು.

Join Whatsapp