ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ತುಂಬು ಗರ್ಭಿಣಿ, ಪತಿ ಸಾವು

Prasthutha|

ಕಣ್ಣೂರು: ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿದ ಪರಿಣಾಮ ತುಂಬು ಗರ್ಭಿಣಿ ಮತ್ತು ಆಕೆಯ ಪತಿ ಸುಟ್ಟು ಕರಕಲಾದ ಘಟನೆ ಕೇರಳದ ಕಣ್ಣೂರು ಜಿಲ್ಲಾಸ್ಪತ್ರೆಯ ಬಳಿ ನಡೆದಿದೆ.

- Advertisement -


ಮೃತರನ್ನು ರೀಷಾ (24) ಮತ್ತು ಆಕೆಯ ಪತಿ ಪ್ರಜಿತ್ (35) ಎಂದು ಗುರುತಿಸಲಾಗಿದೆ. ಹೆರಿಗೆ ನೋವಿನಿಂದಾಗಿ ಆಸ್ಪತ್ರೆಗೆ ಹೋಗುವಾಗ ಆಸ್ಪತ್ರೆ ತಲುಪುವ ಸುಮಾರು 100 ಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ.

ಮಹಿಳೆ, ಆಕೆಯ ಪತಿ ಮತ್ತು ಮೂವರು ಸಂಬಂಧಿಕರು ಕಾರಿನಲ್ಲಿದ್ದರು. ಗಂಡ ಮತ್ತು ಹೆಂಡತಿ ವಾಹನದ ಮುಂಭಾಗದ ಸೀಟಿನಲ್ಲಿ ಕುಳಿತಿದ್ದು, ಸಂಬಂಧಿಕರು ವಾಹನದ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.

- Advertisement -


ಕೂಡಲೇ ಕಾರಿನ ಹಿಂದಿನ ಸೀಟಿನಲ್ಲಿದ್ದವರನ್ನು ರಕ್ಷಿಸಲಾಗಿದೆ. ಆದರೆ ಬೆಂಕಿ ಹರಡುತ್ತಿದ್ದಂತೆ, ಕಾರಿನ ಮುಂಭಾಗದ ಬಾಗಿಲುಗಳು ಲಾಕ್ ಆಗಿವೆ. ಅಗ್ನಿಶಾಮಕ ದಳವು ಸ್ಥಳಕ್ಕೆ ತಲುಪಿ ಗರ್ಭಿಣಿ ಮತ್ತು ಆಕೆಯ ಪತಿಯನ್ನು ಹೊರತೆಗೆಯುವ ಹೊತ್ತಿಗೆ, ಅವರು ಸಾವನ್ನಪ್ಪಿದ್ದರು.

Join Whatsapp