ಮಹಿಳೆಯ ಸ್ನಾನದ ವೀಡಿಯೋ ವೈರಲ್ ಮಾಡಿದ್ದ ಸಂಘಪರಿವಾರದ ನಾಯಕ ನಾಪತ್ತೆ!

Prasthutha|

ಹೊನ್ನಾವರ: ವಿವಾಹಿತ ಮಹಿಳೆಯ ಸ್ನಾನ ಮಾಡುತ್ತಿದ್ದ ವಿಡಿಯೋವನ್ನು ವೈರಲ್ ಮಾಡಿದ್ದ ಸಂಘಪರಿವಾರದ ನಾಯಕ ಉಮೇಶ್ ಸಾರಂಗ ವಿರುದ್ಧ ದೂರು ದಾಖಲಾಗಿದೆ.

- Advertisement -

ಸಂತ್ರಸ್ಥ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಬಿಜೆಪಿ ಮತ್ತು ಸಂಘಪರಿವಾರದ ಪ್ರಬಲ ನಾಯಕನಾಗಿರುವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬಿಜೆಪಿಯ ಹೊನ್ನಾವರ ನಗರಾಧ್ಯಕ್ಷನಾಗಿರುವ ಉಮೇಶ್ ಸಾರಂಗನಿಂದ ರಾಜಿನಾಮೆ ಪಡೆಯಲಾಗಿದೆ ಎಂದು ವರದಿಯಾಗಿದೆ.

- Advertisement -

ಸ್ನಾನ ಮಾಡುತ್ತಿದ್ದ ವೀಡಿಯೋ ಮಾಡಿ ವಾಟ್ಸಪ್‌ನಲ್ಲಿ ಕಳುಹಿಸಿಕೊಡುವಂತೆ ಪೀಡಿಸುತ್ತಿದ್ದ ಸಾರಂಗ್, ವೀಡಿಯೋ ಕಳುಹಿಸದಿದ್ದರೆ ನೀನು ತನ್ನೊಂದಿಗೆ ಸಲುಗೆಯಿಂದಿರುವುದನ್ನು ನಿನ್ನ ಗಂಡನಿಗೆ ತಿಳಿಸುತ್ತೇನೆಂದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ಆತನ ಬೆದರಿಕೆಗೆ ಹೆದರಿ 3-4 ತಿಂಗಳ ಹಿಂದೆ ಸ್ನಾನ ಮಾಡುತ್ತಿರುವ ವೀಡಿಯೋ ಕಳುಹಿಸಿದ್ದು, ಆತ ವೀಡಿಯೋವನ್ನು ವೈರಲ್ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.



Join Whatsapp