ಮೊಬೈಲ್ ಖರೀದಿಸಿದ್ದಕ್ಕೆ ಅದ್ಧೂರಿ ಮೆರವಣಿಗೆ ಆಯೋಜಿಸಿದ ಭೂಪ !

Prasthutha|

ಮಧ್ಯಪ್ರದೇಶ:  ಚಹಾ ಮಾರಾಟಗಾನೊಬ್ಬ ತನ್ನ ಮಗಳಿಗೆ ಮೊಬೈಲ್ ಫೋನ್ ಖರೀದಿಸಿ ಅದ್ಧೂರಿ ಮೆರವಣಿಗೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆ ಮಧ್ಯಪ್ರದೇಶದ ಶಿವಪುರಿ ಬಳಿ ನಡೆದಿದೆ.

- Advertisement -

ಚಹಾ ಮಾರಾಟಗಾರ ಮುರಾರಿ ಖುಶ್ವಾಹ ತನ್ನ ಐದು ವರ್ಷದ ಪುತ್ರಿಯ ಸಂತೋಷಕ್ಕಾಗಿ 12,500 ರೂ. ನೀಡಿ ಸ್ಮಾರ್ಟ್‌ಫೋನ್‌ ಖರೀದಿಸಿದ್ದಾರೆ.

ಜತೆಗೆ, ಉತ್ತರ ಭಾರತದಲ್ಲಿ ಮದುವೆಗೆ ವರ ಸಿಂಗರಿಸಿದ ಸಾರೋಟಿನಲ್ಲಿ ಬರುವಂತೆ, ತಾನು, ಪತ್ನಿ, ಪುತ್ರಿ ಸಿಂಗರಿಸಿದ ರಥದಲ್ಲಿ ಅಂಗಡಿಯಿಂದ ಮನೆಗೆ ಆಗಮಿಸಿದ್ದಾರೆ.
ವಿದ್ಯುತ್‌ ದೀಪ, ವಿವಿಧ ಹೂಗಳಿಂದ ರಥವನ್ನು ಅಲಂಕರಿಸಲಾಗಿತ್ತು. ಆಪ್ತರಿಗೆ ಭೂರಿ ಭೋಜನವೂ ಏರ್ಪಾಟು ಮಾಡಲಾಗಿತ್ತು.

Join Whatsapp