ಜವಾಹರ್ ಲಾಲ್ ನೆಹರೂ ಜನ್ಮದಿನ: ಒಂದೇ ಸಾಲಿನಲ್ಲಿ ಟ್ವೀಟ್ ಮಾಡಿ ಮಾಡಿದ ಮೋದಿ !

Prasthutha|

ದೆಹಲಿ: ಸ್ವತಂತ್ರ ಭಾರತದ ಮೊದಲ ಹಾಗೂ  ಮಾಜಿ ಪ್ರಧಾನಿ ಜವಾಹರ್​ ಲಾಲ್​ ನೆಹರೂ  ಜನ್ಮದಿನದ ನಿಮಿತ್ತ ಪ್ರಧಾನಿ ಮೋದಿ, ಜವಾಹರ್ ​ಲಾಲ್​ ನೆಹರೂ ಜನ್ಮದಿನದ ನಮನಗಳು ಎಂದು ಒಂದೇ ಸಾಲಿನಲ್ಲಿ  ಟ್ವೀಟ್ ಮಾಡಿದ್ದಾರೆ. ಈ ಕುರಿತು ಕಾಂಗ್ರೆಸ್ ಸೇರಿದಂತೆ ಹಲವರು ಮಕ್ಕಳ ದಿನಾಚರಣೆ ಉಲ್ಲೇಖ ಮಾಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

- Advertisement -

ನವೆಂಬರ್ 14 ರಾಷ್ಟ್ರಾದ್ಯಂತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಈ ಬಾರಿ ಜವಾಹ ರ್​ಲಾಲ್​ ನೆಹರೂ ಅವರ 132ನೇ ಜನ್ಮಜಯಂತಿ ಆಚರಿಸಲಾಗುತ್ತಿದೆ.

1954ರಲ್ಲಿ ವಿಶ್ವಸಂಸ್ಥೆ ನವೆಂಬರ್​ 20ರಂದು ವಿಶ್ವ ಮಕ್ಕಳ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿತು. ಅದರಂತೆ ಭಾರತದಲ್ಲೂ 1964ರವರೆಗೆ ಪ್ರತಿವರ್ಷ ನವೆಂಬರ್​ 20ರಂದು ಮಕ್ಕಳ ದಿನ ಆಚರಿಸಲಾಗುತ್ತಿತ್ತು. ಆದರೆ ನೆಹರೂ ಮೃತರಾದ ಬಳಿಕ ಅಂದರೆ 1964ರ ನಂತರ, ಅವರ ಜನ್ಮದಿನದಂದೇ ಭಾರತದಲ್ಲಿ ಮಕ್ಕಳ ದಿನ ಆಚರಿಸಲು ಸಂಸತ್ತಿನಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Join Whatsapp