ಪುತ್ತೂರು ಘಟನೆಗೂ ಹಿಂದುಸ್ತಾನ್ ಲಾಡ್ಜ್ ಗೂ ಸಂಬಂಧವಲ್ಲ: ಮ್ಯಾನೇಜರ್ ಸ್ಪಷ್ಟನೆ

Prasthutha|

ಪುತ್ತೂರು:  ಬಸ್ ನಿಲ್ದಾಣದಲ್ಲಿ ಭಿನ್ನ ಕೋಮಿನ ಜೋಡಿ ಭೇಟಿ ವಿಚಾರದಲ್ಲಿ ಕೆಲವೊಂದು ವೆಬ್ ನ್ಯೂಸ್ ಹಾಗೂ ಚಾನೆಲ್ ಗಳು ಪುತ್ತೂರು ಹಿಂದೂಸ್ತಾನ್ ಲಾಡ್ಜ್ ನ ಹೆಸರನ್ನು ನಮೂದಿಸಿ ಲಾಡ್ಜ್  ನ ಪೋಟೋ ಸಹಿತ ವರದಿ ಪ್ರಕಟಿಸಿದ್ದು, ಇದು ಸತ್ಯಕ್ಕೆ ದೂರವಾದುದು ಎಂದು ಹಿಂದುಸ್ಥಾನ್ ಲಾಡ್ಜ್ ನ ಮ್ಯಾನೇಜರ್ ಮಿರಾಜುದ್ದೀನ್ ಸ್ಪಷ್ಟಪಡಿಸಿದ್ದಾರೆ.

- Advertisement -

ಸುಳ್ಳು ಸುದ್ದಿ ಪ್ರಕಟಿಸಿದ ವೆಬ್ ಪೋರ್ಟಲ್ ಗಳ ವಿರುದ್ಧ ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ನಮ್ಮ ಸಂಸ್ಥೆಯ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಈ ರೀತಿಯ ಪ್ರಚಾರ ಮಾಡಲಾಗಿದೆ. ಹಾಗಾಗಿ ನಮ್ಮ ಲಾಡ್ಜ್ ಬಗ್ಗೆ ಅಪಪ್ರಚಾರ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಮಿರಾಜುದ್ದೀನ್ ತಿಳಿಸಿದ್ದಾರೆ.

- Advertisement -

ನಮ್ಮ ಲಾಡ್ಜ್ ನಲ್ಲಿ ಯಾವುದೇ ಅನ್ಯ ಕೋಮಿಗೆ ಸೇರಿದ ಯುವಕ, ಯುವತಿಯರು ರೂಮ್ ಬುಕ್ ಮಾಡಿಲ್ಲ. ನಾವು ಶಿಸ್ತು ಬದ್ಧವಾಗಿ ನಮ್ಮ ವ್ಯವಹಾರವನ್ನು ಮಾಡುತ್ತಿದ್ದು ಈ ರೀತಿಯ ಅಪಪ್ರಚಾರಗಳಿಂದ ನಮ್ಮ ವ್ಯವಹಾರಕ್ಕೆ ತೊಂದರೆಯುಂಟಾಗುತ್ತಿದೆ. ಭಿನ್ನ ಕೋಮಿನ ಯುವಕ ಮತ್ತು ಯುವತಿಯರ ಭೇಟಿಗೂ ನಮ್ಮ ಲಾಡ್ಜ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹಿಂದೂಸ್ತಾನ್ ಲಾಡ್ಜ್ ಮಾಲಕ ಅಬ್ಬಾಸ್ ಶರೀಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp