ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿಯಿಂದ 300 ಹುದ್ದೆಗಳಿಗೆ ಅರ್ಜಿ ಆಹ್ವಾನ

Prasthutha|

ನವದೆಹಲಿ: ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿ ಲಿಮಿಟೆಡ್ ಸಾರ್ವಜನಿಕರ ವಲಯದ ಜನರಲ್ ಇನ್ಯೂರೆನ್ಸ್ ಕಂಪೆನಿಯಾಗಿದ್ದು, ಖಾಲಿಯಿರುವ 300 ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

- Advertisement -

ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆ ಪದವೀಧರರಾಗಿರಬೇಕೆಂದು ಕಂಪೆನಿಯ ಅಧಿಸೂಚನೆಯಲ್ಲಿ ನಮೂದಿಸಿದೆ. ಮಾತ್ರವಲ್ಲ ಸೆಪ್ಟೆಂಬರ್ 30, 2021 ರ ಮೊದಲು ಅರ್ಹತಾ ಪರೀಕ್ಷಾ ಪ್ರಮಾಣಪತ್ರವನ್ನು ಹೊಂದಿರಬೇಕು. ಏಪ್ರಿಲ್ 1, 2021 ಕ್ಕೆ 21-30 ವರ್ಷ ವಯಸ್ಸಿನವರಾಗಿರಬೇಕು.

ಖಾಲಿಯಿರುವ 300 ಹುದ್ದೆಗಳಲ್ಲಿ 46, 22, 81 ಮತ್ತು 30 ಸ್ಥಾನಗಳನ್ನು ಕ್ರಮವಾಗಿ ಎಸ್.ಸಿ, ಎಸ್.ಟಿ, ಒಬಿಸಿ, ಇ.ಡಬ್ಲ್ಯು.ಎಸ್ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆಯೆಂದು ಕಂಪೆನಿ ತಿಳಿಸಿದೆ.

- Advertisement -

ಮೂರು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಪ್ರಾಥಮಿಕವಾಗಿ ಅರ್ಹತಾ ಪರೀಕ್ಷೆ, ದ್ವಿತೀಯವಾಗಿ ಪ್ರಧಾನ ಪರೀಕ್ಷೆ ಮತ್ತು ಅಂತಿಮವಾಗಿ ಸಂದರ್ಶನ ನಡೆಯಲಿದೆ. ಅದಾಗ್ಯೂ ಪ್ರಧಾನ ಪರೀಕ್ಷೆ ಮತ್ತು ಸಂದರ್ಶನದ ಅಂಕದ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ತನ್ನ ಹೇಳಿಕೆಯಲ್ಲಿ ನಮೂದಿಸಿದೆ.

ಎಸ್.ಸಿ, ಎಸ್.ಟಿ ಮತ್ತು ಪಿ.ಡಬ್ಲ್ಯು.ಬಿ.ಡಿ ಸೇರಿದ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ಮತ್ತು ಸಾಮಾನ್ಯ ವರ್ಗಗಳಿಗೆ 750 ರೂ. ಶುಲ್ಕವನ್ನು ನಿಗದಿಪಡಿಸಿದೆ. ಪ್ರಾಥಮಿಕ ಪರೀಕ್ಷೆ ಅಕ್ಟೋಬರ್ ಮತ್ತು ಪ್ರಧಾನ ಪರೀಕ್ಷೆಯು ನವೆಂಬರ್ ನಲ್ಲಿ ನಡೆಯಲಿದೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ. ಆಸಕ್ತರು ಸಂಪೂರ್ಣ ದಾಖಲೆಗಳೊಂದಿಗೆ ಸೆಪ್ಟೆಂಬರ್ 21, 2021 ರ ರೊಳಗೆ ಕಂಪೆನಿಯ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು

Join Whatsapp