ಮಳದಿ ಮಸೀದಿ ವಿವಾದ: ಯಾವುದೇ ಆದೇಶ ಬೇಡ ಎಂದು ಮಂಗಳೂರು ಕೋರ್ಟ್ ಗೆ ಹೈಕೋರ್ಟ್ ಆರ್ಡರ್

Prasthutha|

ಬೆಂಗಳೂರು: ಮಳದಿ ಮಸೀದಿಯಲ್ಲಿ ದೇವಾಲಯ ಮಾದರಿಯ ರಚನೆ ಪತ್ತೆಯಾಗಿದೆ ಮತ್ತು ಆ ರಚನೆಯನ್ನು ತೆರವುಗೊಳಿಸದಂತೆ ನಿರ್ಬಂಧ್ ವಿಧಿಸುವಂತೆ ಧನಂಜಯ್ ಹಾಗೂ ಮನೋಜ್ ಕುಮಾರ್ ಎಂಬವರು ಸಿವಿಲ್ ನ್ಯಾಯಾಲಯಕ್ಕೆ ಹೂಡಿದ ದಾವೆಯ ಸಿಂಧುತ್ವದ ಕುರಿತು ಯಾವುದೇ ಆದೇಶ ಹೊರಡಿಸಬಾರದೆಂದು ಮಂಗಳೂರು ಸಿವಿಲ್ ಕೋರ್ಟ್ ಗೆ ಹೈಕೋರ್ಟ್ ಆರ್ಡರ್ ಮಾಡಿದೆ.

- Advertisement -

ಅರ್ಜಿದಾರರ ಪರ ವಾದ ಆಲಿಸಿದ ಪೀಠ, ಪ್ರತಿವಾದಿ ಮಸೀದಿ ಅಧ್ಯಕ್ಷರಿಗೆ ನೋಟೀಸ್ ನೀಡಿತ್ತು.ಜೊತೆಗೆ ಪ್ರಕರಣ ಸಂಬಂಧ ಸಲ್ಲಿಕೆಯಾದ ದಾವೆಯ ಸಿಂಧುತ್ವದ ಕುರಿತು ವಾದ-ಪ್ರತಿವಾದ ಆಲಿಸಿದರೂ ಆ ಬಗ್ಗೆ ಯಾವುದೇ ಆದೇಶ ಹೊರಡಿಸಬಾರದೆಂದು ಮಂಗಳೂರಿನ 3 ನೇ ಹೆಚ್ಚುವರಿ ಸಿವಿಲ್ ಕೋರ್ಟ್ ಗೆ ನಿರ್ದೇಶಿಸಿ , ವಿಚಾರಣೆಯನ್ನು ಜೂನ್ 17 ಕ್ಕೆ ಮುಂದೂಡಿದೆ.

1991 ರ ಸಾರ್ವಜನಿಕ ಪೂಜಾಸ್ಥಳ ಕಾಯ್ದೆಯ ಅನುಸಾರ ದಾವೆಯು ವಿಚಾರ ಮಾನ್ಯತೆ ಹೊಂದಿಲ್ಲ ಎಂದು ಮಸೀದಿ ಅರ್ಜಿ ಸಲ್ಲಿಸಿತು. ಇದನ್ನು ಸಿವಿಲ್ ಕೋರ್ಟ್ ಪರಿಗಣಿಸಿತ್ತಾದರೂ ಪುರಾತನ ಸ್ಮಾರಕಗಳಿಗೆ ಸಾರ್ವಜನಿಕ ಪೂಜಾಸ್ಥಳ ಕಾಯಿದೆ ಅನ್ವಯವಾಗಲ್ಲ ಎಂದು ಹೇಳಿದೆ.

Join Whatsapp