ಮಣ್ಣು ಉಳಿಸಿ ಅಭಿಯಾನಕ್ಕೆ ಸದ್ಗುರು ಜತೆ ಮಹಾರಾಷ್ಟ್ರ ಒಪ್ಪಂದ

Prasthutha|

ಮುಂಬೈ: ಈಶ ಫೌಂಡೇಶನ್ ಆರಂಭಿಸಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ಉತ್ತರ ಪ್ರದೇಶ, ಗುಜರಾತ್ ಸರ್ಕಾರ ಸೇರಿದಂತೆ ನಾಲ್ಕು ರಾಜ್ಯಗಳು ಕೈಜೋಡಿಸಿವೆ. ಇದೀಗ ಮಹಾರಾಷ್ಟ್ರ ಸರ್ಕಾರವೂ ಕೂಡ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿಕೊಂಡಿದೆ.

- Advertisement -

ಮುಂಬೈ ಮಹಾನಗರದ ಜಿಯೋ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಸಮಾವೇಶದಲ್ಲಿ ಮಹಾರಾಷ್ಟ್ರದ ಪರಿಸರ ಮಂತ್ರಿ ಆದಿತ್ಯ ಠಾಕ್ರೆ ಮತ್ತು ಸದ್ಗುರು ಪರಸ್ಪರ ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸದ್ಗುರು, ಮೂರು ತಿಂಗಳ ಹಿಂದೆ ಮಣ್ಣು ಜನಪ್ರಿಯ ವಿಷಯವಾಗಿರಲಿಲ್ಲ. ಆದರೆ ತಮ್ಮ ಪಯಣ ಶುರುವಾದ ಮೇಲೆ ಸುಮಾರು 2.8 ಬಿಲಿಯನ್ ಜನರು ಸ್ಪಂದಿಸಿದ್ದಾರೆ ಎಂದು ಹೇಳಿದರು

ಭೂಮಿಗೆ ಮಾತೆಯ ಸ್ಥಾನ ನೀಡಿರುವ ಭಾರತ ಮಣ್ಣಿನ ಜೀಣೋದ್ಧಾರದ ಕಾರ್ಯದಲ್ಲಿ ಪಾಲ್ಗೊಂಡು ಇಡೀ ವಿಶ್ವಕ್ಕೆ ಮುಂದಾಳಾಗಬೇಕು. ಈಗಲಾದರೂ ಪ್ರತಿಯೊಬ್ಬರು ಮಣ್ಣಿನ ಮಹತ್ವವನ್ನು ಅರಿತು ಮಣ್ಣು ಉಳಿಸಿ ಅಭಿಯಾನದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ.

Join Whatsapp