ನಟ ದರ್ಶನ್‌ ಫಾರ್ಮ್‌ ಹೌಸ್‌’ನಿಂದ 4 ವನ್ಯ ಪಕ್ಷಿ ವಶ: ಪ್ರಕರಣ ದಾಖಲು

Prasthutha|

- Advertisement -

ಮೈಸೂರು: ನಟ ದರ್ಶನ್ ಅವರದ್ದು ಎನ್ನಲಾದ ಫಾರ್ಮ್‌ ಹೌಸ್‌’ಗೆ ಶುಕ್ರವಾರ ತಡರಾತ್ರಿ ದಾಳಿ ನಡೆಸಿದ ಮೈಸೂರು ಅರಣ್ಯ ಸಂಚಾರಿದಳದ ಅಧಿಕಾರಿಗಳು, ನಾಲ್ಕು ಪಕ್ಷಿಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಾಗಿದೆ.‌

ಕೆಂಪಯ್ಯನಹುಂಡಿಯ ತೋಟದ ಮನೆಯಲ್ಲಿ ಸಾಕುತ್ತಿರುವ ಕೆಲವು ವಿದೇಶಿ ಪ್ರಾಣಿ, ಪಕ್ಷಿಗಳಿಗೆ ವನ್ಯಜೀವಿ ಕಾಯ್ದೆಯಡಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಈ ಕಾರಣಕ್ಕೆ ದಾಳಿ ನಡೆದಿದೆ ಎಂದು ಅರಣ್ಯ ಸಂಚಾರಿ ದಳದ ಮುಖ್ಯಸ್ಥ ಡಿಸಿಎಫ್‌ಒ ಭಾಸ್ಕರ್‌ ತಿಳಿಸಿದರು.

- Advertisement -

ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿರುವ 4 ಬಾತುಕೋಳಿಗಳು ವಿಶಿಷ್ಟ ಪ್ರಭೇದದ ಜಲಪಕ್ಷಿಗಳಾಗಿದ್ದು (ಬಾರ್‌ ಹೆಡೆಡ್‌ ಗೂಸ್‌) ಅವುಗಳನ್ನು ಸಾಕುವುದು ಅಪರಾಧವಾಗಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp