ದೌರ್ಜನ್ಯಕ್ಕೆ ಒಳಪಟ್ಟ ಕೊರಗ ಸಮುದಾಯದ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಅತ್ಯಂತ ಹೇಯ ಕೃತ್ಯ: ಕಾಂಗ್ರೆಸ್

Prasthutha|

ಬೆಂಗಳೂರು: ಹಿಂದೂ ರಕ್ಷಣೆಯ ಬಗ್ಗೆ ಭಯಂಕರ ಭಾಷಣ ಬಿಗಿಯುವ ಕರಾವಳಿಯ ಬಿಜೆಪಿ ನಾಯಕರು ಎಲ್ಲಿ ಅಡಗಿದ್ದಾರೆ? ಕೊರಗ ಸಮುದಾಯ ಹಿಂದುಗಳಾಗಿ ಕಾಣಲಿಲ್ಲವೇ? ನೈಜ ಹಿಂದೂಗಳಿಗೆ ಹಿಂದುತ್ವವಾದಿ ಬಿಜೆಪಿಯೇ ಅಪಾಯಕಾರಿ ಎನ್ನುವುದು ಇದರಿಂದಲೇ ಸಾಬೀತಾಗುತ್ತಿದೆ, ದಲಿತರು, ಶೋಷಿತರ ಮೇಲಿನ ದೌರ್ಜನ್ಯವನ್ನು ಸರ್ಕಾರವೇ ಪ್ರಾಯೋಜಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿಯ ಕಣ ಕಣದಲ್ಲೂ ದಲಿತ ವಿರೋಧಿ ಧೋರಣೆ ತುಂಬಿದೆ. ಕೋಟಾದ ಕೊರಗ ಜನಾಂಗದ ಮದುವೆ ಕಾರ್ಯಕ್ರಮಕ್ಕೆ ನುಗ್ಗಿ ಅಮಾನುಷವಾಗಿ ಲಾಠಿ ಚಾರ್ಜ್ ನಡೆಸಿದ ಪೊಲೀಸರು ಈಗ ದೌರ್ಜನ್ಯಕ್ಕೆ ಒಳಪಟ್ಟ ಕೊರಗ ಸಮುದಾಯದ ಮೇಲೆಯೇ ಸರ್ಕಾರದ ಜಾಮೀನು ರಹಿತ ಸೆಕ್ಷನ್ ಗಳ ಪ್ರಕರಣ ದಾಖಲಿಸಿದ್ದು ಅತ್ಯಂತ ಹೇಯ ಕೃತ್ಯ. ಗೃಹ ಸಚಿವರೇ, ನಿಮ್ಮ ಇಲಾಖೆಯ ಈ ಹೇಯ ಕೃತ್ಯಗಳಿಗೆ ನಿಮ್ಮದೂ ಸಹಕಾರವಿದೆಯೇ? ಯಾರ ಓಲೈಕೆಗಾಗಿ ಕೊರಗ ಸಮುದಾಯದ ವಿರುದ್ಧ ಈ ಷಡ್ಯಂತ್ರ ರೂಪಿಸಿದ್ದೀರಿ? ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರದಲ್ಲಿ ಹಿಂದುಗಳು ಮತ್ತು  ಹಿಂದುಳಿದವರು ಬದುಕುವ ಸ್ವತಂತ್ರ ಹೊಂದಿಲ್ಲವೇ? ಎಂದು ಪ್ರಶ್ನಿಸಿದೆ.

Join Whatsapp