ಮೃತದೇಹದ ಅಂತ್ಯಸಂಸ್ಕಾರಕ್ಕೆ ತಡೆವೊಡ್ಡಲಾಗಿದೆ ಎಂಬುದು ಸುಳ್ಳು ಸುದ್ದಿ: SDPI

Prasthutha|

ಮಂಜೇಶ್ವರ: ಅಂತ್ಯ ಸಂಸ್ಕಾರ ನೆರವೇರಿಸಲು ಮೃತದೇಹದೊಂದಿಗೆ ಉದ್ಯಾವರದ ಸಾರ್ವಜನಿಕ ಸ್ಮಶಾನಕ್ಕೆ ಬಂದವರನ್ನು ಗುಂಪೊಂದು ಮಾರಕಾಯುಧಗಳೊಂದಿಗೆ ತಡೆದಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು. ಇದು RSS, ಸಂಘಪರಿವಾರ ಕೋಮು ಗಲಭೆ ಸೃಷ್ಟಿಸಲು ಹೆಣೆದ ಸುಳ್ಳಿನ ಕಂತೆ ಎಂದು SDPI ಮಂಜೇಶ್ವರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಹೇಳಿದ್ದಾರೆ.

- Advertisement -

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಾರ್ವಜನಿಕ ಸ್ಮಶಾನವನ್ನು ಹಿಂದೂ ರುಧ್ರ ಭೂಮಿ ಎಂಬ ಹೆಸರಿನಲ್ಲಿ ಕರೆದು ಹಿಂದೂ ಸಮುದಾಯವನ್ನು ವಂಚಿಸುವ ಹುನ್ನಾರ ಅಡಗಿದೆ. ಇದರಲ್ಲಿ ಜಾತ್ಯತೀತ ಪಕ್ಷಗಳು ಎಂದು ಕರೆಯಲ್ಪಡುವ ಸಿ.ಪಿ.ಐ, ಕಾಂಗ್ರೆಸ್ ಮುಂತಾದ ಪಕ್ಷಗಳು ಕೂಡ ಸಂಘಪರಿವಾರದೊಂದಿಗೆ ಸೇರಿ ಕೊಂಡು ಸ್ವಯಂ ಅಪಹಾಸ್ಯಕ್ಕೀಡಾಗಿದೆ ಎಂದು ಅವರು ಟೀಕಿಸಿದ್ದಾರೆ.

ಮೃತದೇಹವನ್ನು ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡುವ ಬದಲು ಸಾರ್ವಜನಿಕರು ಓಡಾಡುವ ರಸ್ತೆ ಬದಿಯಲ್ಲೇ ನೆರವೇರಿಸಿದ್ದನ್ನು ಊರವರು ಪ್ರಶ್ನೆ ಮಾಡಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ನಮ್ಮನ್ನು ಆಯುಧಗಳೊಂದಿಗೆ ಗುಂಪು ತಡೆಯಿತು ಎಂದು ಸುಳ್ಳು ಪ್ರಚಾರ ಮಾಡಲಾಗಿದೆ. ಈ ರೀತಿಯ ಸುಳ್ಳು ಹೇಳಿಕೆಗಳನ್ನು ಹರಿಯಬಿಟ್ಟು ಸಾರ್ವಜನಿಕರನ್ನು ದಾರಿ ತಪ್ಪಿಸುವಂತೆ ಮಾಡಿದ ರಾಜು ಬೆಳಿಚಪ್ಪಾಡ್ ಎಂಬವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp