ಭಾರೀ ಮಳೆಗೆ ಹಾನಿ: ಶ್ರವಣಬೆಳಗೊಳದಲ್ಲಿ ಸಚಿವರಾದ ಆರ್.ಅಶೋಕ್, ಕೆ.ಗೋಪಾಲಯ್ಯ ಪರಿಶೀಲನೆ

Prasthutha|

ಹಾಸನ: ಕಂದಾಯ ಸಚಿವ ಆರ್. ಅಶೋಕ್ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ‌.ಗೋಪಾಲಯ್ಯ ಗುರುವಾರ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಮಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಿದರು.

- Advertisement -

 ಶ್ರವಣಬೆಳಗೊಳದ ಇಂದ್ರಗಿರಿ ಬೆಟ್ಟದಲ್ಲಿ ಉಂಟಾಗಿರುವ ಕಲ್ಲು ಮತ್ತು ಮಣ್ಣು ಕುಸಿತ ವೀಕ್ಷಿಸಿದ ಸಚಿವರು ತಕ್ಷಣವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಇದೇ ವೇಳೆ ಇಬ್ಬರೂ ಸಚಿವರು ಶ್ರವಣಬೆಳಗೊಳದಲ್ಲಿ ಮನೆ ಹಾನಿಗೀಡಾದ ಫಲಾನುಭವಿಗಳಿಗೆ ತಕ್ಷಣದ ಪರಿಹಾರದ ಚೆಕ್  ವಿತರಿಸಿದರು.



Join Whatsapp