ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ‘ಜನಾರೋಗ್ಯವೇ ರಾಷ್ಟ ಶಕ್ತಿ’ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಬಂಟ್ವಾಳ ವಲಯ ವತಿಯಿಂದ ಮ್ಯಾರಥಾನ್ ಮತ್ತು ಸಭಾ ಕಾರ್ಯಕ್ರಮವು ಮನಿಹಳ್ಳದಲ್ಲಿ ನಡೆಯಿತು.
ಮೈಂದಾಲ ಜಂಕ್ಷನ್ ನಿಂದ ಮನಿಹಳ್ಳ ಕ್ರಾಸ್ ತನಕ ಆಕರ್ಷಕ ಮ್ಯಾರಥಾನ್ಗೆ ಪಿ ಎಫ್ ಐ ವಲಯಾಧ್ಯಕ್ಷ ಕಬೀರ್ ಅಕ್ಕರಂಗಡಿ ಚಾಲನೆ ನೀಡಿದರು. ಮ್ಯಾರಥಾನ್ ಜೊತೆಗೆ ಆಕರ್ಷಕ ತಾಲೀಮು, ಯೋಗ, ಟ್ವಿಕಾಂಡೋ, ಸೈಕ್ಲಿಂಗ್ ಪ್ರದರ್ಶನ ಮುಂತಾದ ಆತ್ಮ ರಕ್ಷಣಾ ಕಲೆ ಪ್ರದರ್ಶನ ನಡೆಯಿತು.
ಸಭಾ ಕಾರ್ಯಕ್ರಮದ ಮುಖ್ಯ ಅಥಿಗಳಾಗಿ ಭಾಗವಹಿಸಿದ ಪಿ ಎಫ್ ಐ ಜಿಲ್ಲಾಧ್ಯಕ್ಷ ಇಜಾಝ್ ಅಹಮದ್ ಮಾತನಾಡಿ ‘ಆರೋಗ್ಯವಂತ ವ್ಯಕ್ತಿ, ಸಮಾಜವು ಈ ದೇಶದ ಸಂಪತ್ತಾಗಿದೆ, ದಿನನಿತ್ಯ ಹಲವು ರೀತಿ ಖಾಯಿಲೆಗಳು ಪತ್ತೆಯಾಗುವ ಈ ಸಂಧರ್ಬದಲ್ಲಿ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಅದರೊಂದಿ ಮಾನಸಿಕ ಆರೋಗ್ಯವನ್ನು ಕೂಡ ಗಟ್ಟಿಗೊಳಿಸುವ ಮೂಲಕ ಫ್ಯಾಸಿಸಮ್ ವಿರುದ್ಧ ಹೋರಾಟಕ್ಕೆ ಎಲ್ಲರೂ ಸಜ್ಜಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಪುರಸಭಾ ಸದಸ್ಯ ಇದ್ರೀಸ್ ಪಿ ಜೆ, ಪಿ ಎಫ್ ಐ ವಲಯ ಕಾರ್ಯದರ್ಶಿ ಇರ್ಷಾದ್ ಬಂಟ್ವಾಳ ಉಪಸ್ಥಿತರಿದ್ದರು.
ಶಫೀಕ್ ಕಾರ್ಯಕ್ರಮ ನಿರೂಪಿಸಿದರು.