ಕೇರಳದ ಕೊಟ್ಟಯಂನಲ್ಲಿ ಶೂನ್ಯ ಬಡತನ..! ಯಾದಗಿರಿಯಲ್ಲಿ 41.67%..!

Prasthutha|

ನವೆದೆಹಲಿ: ನೀತಿ ಆಯೋಗದ ಬಹು ಆಯಾಮ ಬಡತನ ಸೂಚ್ಯಂಕ (MPI) ಪ್ರಕಾರ ಕೇರಳದ ಕೊಟ್ಟಯಂ ಜಿಲ್ಲೆಯು ಶೂನ್ಯ ಬಡತನ ಹೊಂದಿರುವುದಾಗಿ ದಾಖಲಾಗಿದೆ.

- Advertisement -

ನೀತಿ ಆಯೋಗದ ಸೂಚ್ಯಂಕದ ಪ್ರಕಾರ ಕೇರಳ ರಾಜ್ಯವು ದೇಶದಲ್ಲೇ ಅತ್ಯಂತ ಕನಿಷ್ಠ ಬಡತನ ಪ್ರಮಾಣ (0.71%) ಯನ್ನು ಹೊಂದಿರುವುದಾಗಿ ಹೇಳಿದೆ. ಕೇರಳದ ಕೊಟ್ಟಯಂ ಜಿಲ್ಲೆಯು ಶೂನ್ಯ ಬಡತನ ಹಾಗೂ ಕೇರಳದಲ್ಲಿ ವಯನಾಡ್ ಜಿಲ್ಲೆ ಹೆಚ್ಚು ಬಡತನ (3.48%)ವನ್ನು ಹೊಂದಿರುವುದಾಗಿ ವರದಿ ಹೇಳಿದೆ. ಉಳಿದಂತೆ ಎರ್ನಾಕುಳಂ (0.10), ಕೋಝಿಕ್ಕೋಡ್ (0.26), ತ್ರಿಶೂರ್(0.33%) ಕಣ್ಣೂರ್ (0.44%) ಪಾಲಕ್ಕಾಡ್ (0.62%) ಬಡತನವನ್ನು ಹೊಂದಿದೆ.

ದೇಶದಲ್ಲಿಯೇ ಅತ್ಯಂತ ಬಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 19ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಕಡಿಮೆ ಬಡತನ (2.31%) ಹಾಗೂ ಅತ್ಯಂತ ಹೆಚ್ಚು ಯಾದಗಿರಿ (41.67%)ಯಲ್ಲಿ ದಾಖಲಾಗಿದೆ. ತಮಿಳುನಾಡಿನಲ್ಲಿ ಚೆನ್ನೈ ನಗರದಲ್ಲಿ ಅತ್ಯಂತ ಕಡಿಮೆ ಬಡತನ ದಾಖಲಾಗಿದೆ (0.98%), ಅತಿಹೆಚ್ಚು ಪುದುಕೋಟೈನಲ್ಲಿ ( 11.7%) ದಾಖಲಾಗಿದೆ.

- Advertisement -

ಬಿಹಾರ, ಜಾರ್ಖಂಡ್ ಹಾಗೂ ಉತ್ತರಪ್ರದೇಶ ರಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಬಡಜನರಿರುವ ರಾಜ್ಯಗಳ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಕುಟುಂಬಗಳು ಎದುರಿಸುತ್ತಿರುವ ಬಹು ಆಯಾಮದ ಸಮಸ್ಯೆಗಳನ್ನು ಆಧರಿಸಿ ಸೂಚ್ಯಂಕವನ್ನು ರೂಪಿಸಲಾಗಿದೆ ಎಂದು ನೀತಿ ಆಯೋಗ ತಿಳಿಸಿದೆ. ಆರೋಗ್ಯ, ಶಿಕ್ಷಣ, ಮತ್ತು ಜೀವನ ಗುಣಮಟ್ಟವನ್ನು ಮುಖ್ಯ ಮಾನದಂಡವಾಗಿ ಪರಿಗಣಿಸಲಾಗಿದೆ.

Join Whatsapp