ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರ: ಹೈಕೋರ್ಟ್ ತೀರ್ಪು ವಕ್ಫ್ ಬೋರ್ಡ್ ನಿಯಮಗಳಿಗೆ ವಿರುದ್ಧ: ಆಲಂ ಪಾಷ

Prasthutha|

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರ ಕುರಿತಂತೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು ವಕ್ಫ್ ಬೋರ್ಡ್ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಹೇಳಿದ್ದಾರೆ.

- Advertisement -


ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1965ರ ಉಚ್ಚ ನ್ಯಾಯಾಲಯದ ಆದೇಶವನ್ನು ಆಧರಿಸಿ ಹೈಕೋರ್ಟ್ ತೀರ್ಪು ನೀಡಬೇಕಿತ್ತು. ಹೈಕೋರ್ಟ್ ಗಿಂತ ಈ ವಿಚಾರ ಕುರಿತು ವಕ್ಫ್ ಬೋರ್ಡ್ ತೀರ್ಮಾನ ಮಾಡಬೇಕಿತ್ತು. ಆದರೆ ನೇರವಾಗಿ ಹೈಕೋರ್ಟ್ ಮೊರೆ ಹೋಗಿರುವುದು ಸರಿಯಲ್ಲ. ಈ ತೀರ್ಪಿನಿಂದ ಒಂದು ಕೋಟಿ 64 ಲಕ್ಷ ಮುಸ್ಲಿಮರಿಗೆ ಅತ್ಯಂತ ನೋವು ತಂದಿದೆ ಎಂದರು.


ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಹಾಗೂ ನಮಾಝ್ ಅಂದರೆ ಹಿಂದೂ ಮತ್ತು ಮುಸ್ಲಿಂ ಸಮುದಾಯದವರಿಗೆ ಅವರ ಧಾರ್ಮಿಕ ಆಚರಣೆಗೆ ಅವಕಾಶ ಮಾಡಿಕೊಟ್ಟಿರುವುದು ಗೊಂದಲಕ್ಕೆ ಈಡು ಮಾಡಿದಂತಾಗಿದೆ. ಅಲ್ಲಿಯ ಸ್ಥಳೀಯ ಶಾಸಕರು, ವಕ್ಫ್ ಬೋರ್ಡ್ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು ಇಂತಹ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. 1965ರಲ್ಲಿ ಉಚ್ಚನ್ಯಾಯಾಲಯ ವಕ್ಫ್ ಬೋರ್ಡ್ ಸ್ವತ್ತು ಎಂದು ಹೇಳಿದೆ. ಚುನಾವಣಾ ರಾಜಕೀಯಕ್ಕಾಗಿ ಈ ವಿಚಾರವನ್ನು ಎಳೆದು ತಂದಿರುವುದು ಸರಿಯಲ್ಲ ಎಂದು ಆರೋಪಿಸಿದರು.

- Advertisement -

ಬೆಂಗಳೂರಿನಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನುಗಳು ಬೇರೆಯವರ ಪಾಲಾಗಿವೆ. ಆದರೆ ಎರಡು ಎಕರೆ ಜಾಗಕ್ಕಾಗಿ ಬಿಬಿಎಂಪಿ, ರಾಜ್ಯ ಸರ್ಕಾರ ತಗಾದೆ ತೆಗೆದಿರುವುದು ಸರಿಯಲ್ಲ. ಮುಂಬರುವ ಚುನಾವಣಾ ಉದ್ದೇಶದಿಂದ ವಕ್ಫ್ ಬೋರ್ಡ್ ಜಾಗದ ವಿಚಾರದಲ್ಲಿ ಆಯಾ ಸಮುದಾಯದ ಜನರ ಮನಸೆಳೆಯುವ ಉದ್ದೇಶದಿಂದ ಕ್ಷುಲ್ಲಕ ರಾಜಕಾರಣ ನಡೆಸುವುದು ಸರಿಯಲ್ಲ ಎಂದರು.
ಗುಜರಾತ್ ನ ಬಲ್ಕಿಸ್ ಬಾನು ಅತ್ಯಾಚಾರ ಆರೋಪಗಳನ್ನು ನಿರ್ದೂಷಿ ಎಂದು ಬಿಡುಗಡೆಗೊಳಿಸಿರುವುದು ಸರಿಯಲ್ಲ. ಬಿಡುಗಡೆಯಾದ ಆರೋಪಿಗಳಿಗೆ ರಾಜಾತಿಥ್ಯ ನೀಡುವುದು ಸರಿಯಲ್ಲ. ಇದರ ವಿರುದ್ಧ ನ್ಯಾಯಾಲಯ ಹಾಗೂ ಹೊರಗಡೆ ಹೋರಾಟ ನಡೆಸುವುದಾಗಿ ತಿಳಿಸಿದರು.

Join Whatsapp