ಬಿಡಿಎ ಬದಲಿ ನಿವೇಶನ ಪಡೆಯಲು ಯಾವುದೇ ಪ್ರಭಾವ ಬಳಸಿಲ್ಲ: ಆರಗ ಜ್ಞಾನೇಂದ್ರ

Prasthutha|

ಬೆಂಗಳೂರು: ಕಳೆದ ಹದಿನೇಳು ವರ್ಷಗಳ ಹಿಂದೆ ಬಿಡಿಎನಿಂದ ಮಂಜೂರಾದ ನಿವೇಶನವನ್ನು ವಿವಿಧ ಕಾರಣಗಳನ್ನು ನೀಡಿ ಮಂಜೂರಾತಿ ಮಾಡಿದ ಸಂಸ್ಥೆಯೇ (ಬಿಡಿಎ) ವಾಪಸು ಪಡೆದಿದೆ. ಬಿಡಿಎ ಬದಲಿ ನಿವೇಶನ ಪಡೆಯಲು ಯಾವುದೇ ಪ್ರಭಾವ ಬಳಸಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

- Advertisement -


ಮಂಜೂರಾತಿ ಪಡೆದ ನಿವೇಶನಕ್ಕಾಗಿ ಕಳೆದ ಹದಿನೇಳು ವರ್ಷಗಳಲ್ಲಿ ಮೂರು ಬಾರಿ ನೋಂದಣಿ ಸಂಬಂಧ ಶುಲ್ಕ ಪಾವತಿ ಮಾಡಿದ್ದರೂ ಬಿಡಿಎ ನಿವೇಶನ ಪಡೆದು ಮನೆ ಕಟ್ಟಲು ಸಾಧ್ಯವಾಗಿಲ್ಲ. ಈ ಹಿಂದೆ ಶಾಸಕರೂ ಹಾಗೂ ಸಚಿವರಿಗೆ ಬಿಡಿಎ ನಿವೇಶನಗಳನ್ನು ಹಂಚಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈ ಕೋರ್ಟ್ ನಲ್ಲಿ ಸಲ್ಲಿಸಲಾಗಿತ್ತು.
ಅರ್ಜಿಯ ಸಂಬಂಧ ಮಂಜೂರಾತಿ ಪಡೆದ ನಿವೇಶನದ ಕುರಿತು ಪರಿಶೀಲಿಸಲು ರಾಜ್ಯ ಹೈಕೋರ್ಟ್ ನೇಮಿಸಿದ್ದ ನ್ಯಾಯಾಧೀಶ ಫಾರೂಖ್ ಸಮಿತಿ ಸಹ ಸ್ಥಿರೀಕರಿಸಿದ್ದು ಬಿಡಿಎ ನಿಯಮಾವಳಿಗಳ ಅನುಸಾರವಾಗಿಯೇ ನನಗೆ ನಿವೇಶನ ಮಂಜೂರಾತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.


ಬಿಡಿಎನಿಂದ ನಿವೇಶನ ಮಂಜೂರಾತಿಗಾಗಿ ಯಾವುದೇ ಪ್ರಭಾವ ಅಥವಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. G ಕೆಟಗರಿ ಅಡಿಯಲ್ಲಿ ಈ ಹಿಂದೆ ಇತರ ಶಾಸಕರೂ ಹಾಗೂ ಸಚಿವರು ಮಂಜೂರಾತಿ ಪಡೆದ ರೀತಿಯಲ್ಲಿಯೇ ನನಗೂ ಬಿಡಿಎ ನಿವೇಶನ ಮಂಜೂರಾಗಿರುತ್ತದೆ. ಪ್ರಸ್ತುತ ಬದಲಿ ನಿವೇಶನ ಮಂಜೂರು ಮಾಡಲು ಬಿಡಿಎ ನಿಗದಿ ಪಡಿಸಿದ ಅಧಿಕ ಶುಲ್ಕವನ್ನೂ ಸಹ ಪಾವತಿಸಿದ್ದೇನೆ ಎಂದು ಅವರು ತಿಳಿಸಿದರು.

- Advertisement -


ಈ ಹಿಂದೆ ನೂರಾರು ಮಂದಿ ಬಿಡಿಎನಿಂದ ನಿವೇಶನ ಮಂಜೂರಾತಿ ಪಡೆದು ನೋಂದಣಿ ಶುಲ್ಕ ಕಟ್ಟಿದ್ದರೂ ನಿವೇಶನವನ್ನು ಪಡೆಯುವುದರಿಂದ ವಂಚಿತರಾಗಿದ್ದರು. ನಂತರ ನ್ಯಾಯಾಲಯದ ಆದೇಶದ ಮೇರೆಗೆ ಅವರಿಗೆ ಬಿಡಿಎ ಪರ್ಯಾಯ ನಿವೇಶನ ನೀಡಿ ಪರಿಹಾರ ಒದಗಿಸಿದೆ. ನಾನು ಮೂರು ಬಾರಿ ಮಂಜೂರಾದ ನಿವೇಶನಕ್ಕೆ ನೋಂದಣಿ ಮಾಡಿದ್ದರೂ ನಿವೇಶನದ ಹಕ್ಕು ಪಡೆಯಲು ಇದುವರೆಗೂ ಸಾಧ್ಯವಾಗಿಲ್ಲ. ಬಿಡಿಎನಿಂದ ನ್ಯಾಯ ಪಡೆಯಲು ನ್ಯಾಯಾಲಯದ ಮೊರೆ ಹೋಗಲು ಸಹ ನಿರ್ಧರಿಸಿದ್ದೇನೆ ಆರಗ ಜ್ಞಾನೇಂದ್ರ ಹೇಳಿದರು.

Join Whatsapp