ಹರೇಕಳ : ಆಯತಪ್ಪಿ ನೇತ್ರಾವತಿ ನದಿಗೆ ಬಿದ್ದ ಅಪರಿಚಿತ ವ್ಯಕ್ತಿಯ ರಕ್ಷಣೆ

Prasthutha|

►ಹರೇಕಳ ಪಂಚಾಯತ್ ಉಪಾಧ್ಯಕ್ಷ ಮಜೀದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

- Advertisement -

ಹರೇಕಳ : ಹರೇಕಳ – ಅಡ್ಯಾರ್ ಸಂಪರ್ಕಿಸುವ ಸೇತುವೆಯಲ್ಲಿ ಅಡ್ಯಾರ್ ಭಾಗದಲ್ಲಿ ಇಂದು ಬೆಳ್ಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬರು ಆಯತಪ್ಪಿ ಕಾಲು ಜಾರಿ ನದಿಗೆ ಬಿದ್ದಿದ್ದು, ಈ ಸಮಯದಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರಾದ ಮುಯ್ಯದ್ದಿ ಮತ್ತು ಸಲೀಂ ರವರು ವ್ಯಕ್ತಿಯನ್ನು ಮೆಲೇಕೆತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹರೇಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಮಜೀದ್ ಹಾಗೂ ಪಂಚಾಯತ್ ಸದಸ್ಯ ಹನೀಫ್ ಬೈತಾರ್ ಅಪರಿಚಿತ ವ್ಯಕ್ತಿಯ ಕುಶಲೋಪರಿ ವಿಚಾರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

- Advertisement -

ಮಾಹಿತಿ ತಿಳಿದು ಕೊಣಾಜೆ ಆರಕ್ಷಕ ಠಾಣಾ ಸಿಬ್ಬಂದಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಎಸ್ಡಿಪಿಐ ಕಾರ್ಯಕರ್ತರಾದ  ಲತೀಫ್, ಅಝರ್ ಸ್ಥಳೀಯರೊಂದಿಗೆ ಕೈ ಜೋಡಿಸಿದರು.

Join Whatsapp