ಸಜಿಪನಡು ಗ್ರಾ. ಪಂ. : ಸತತ ಮೂರನೇ ಬಾರಿ ಅಧಿಕಾರಕ್ಕೇರಿದ SDPI

Prasthutha|

ಯು.ಟಿ ಖಾದರ್ ಕ್ಷೇತ್ರದ ಪಂಚಾಯತ್’ನಲ್ಲಿ ಹ್ಯಾಟ್ರಿಕ್ ಸಾಧಿಸಿದ SDPI

- Advertisement -

ಉಳ್ಳಾಲ : ಸ್ಪೀಕರ್ ಯು.ಟಿ ಖಾದರ್ ಕ್ಷೇತ್ರದ ಮತ್ತೊಂದು ಗ್ರಾಮ ಪಂಚಾಯತ್ SDPI ಪಾಲಾಗಿದೆ. ಉಳ್ಳಾಲ ತಾಲೂಕಿನ ಸಜಿಪನಡು ಗ್ರಾಮ ಪಂಚಾಯತ್’ನ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರಾಗಿ ಎಸ್’ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಗದ್ದುಗೆ ಏರಿದ್ದಾರೆ. ಅಧ್ಯಕ್ಷರಾಗಿ ಎಸ್.ಎನ್ ಅಬ್ದುಲ್ ರಹಿಮಾನ್ (ಇಕ್ಬಾಲ್), ಉಪಾಧ್ಯಕ್ಷರಾಗಿ ಸಬಿತಾ ಡಿಸೋಜಾ ಚುನಾಯಿತರಾಗಿದ್ದಾರೆ.


ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಜಿಪನಡು ಪಂಚಾಯತ್’ನಲ್ಲಿ 2015ರಿಂದ ಸತತವಾಗಿ SDPI ಬೆಂಬಲಿತರೇ ಅಧಿಕಾರದಲ್ಲಿದ್ದು, ಈ ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

- Advertisement -

ಒಟ್ಟು 15 ಸದಸ್ಯ ಬಲದ ಪಂಚಾಯತ್’ನಲ್ಲಿ SDPI ಬೆಂಬಲಿತ 7, ಕಾಂಗ್ರೆಸ್ ಬೆಂಬಲಿತ 4, ಬಿಜೆಪಿ ಬೆಂಬಲಿತ 3 ಮತ್ತು ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಇಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ SDPI ಬೆಂಬಲಿತರ ಅಭ್ಯರ್ಥಿ ಎಸ್.ಎನ್ ಅಬ್ದುಲ್ ರಹಿಮಾನ್ 7 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿಗೆ 5 ಮತಗಳಷ್ಟೇ ಬಿದ್ದಿದೆ.


ಉಪಾಧ್ಯಕ್ಷ ಚುನಾವಣೆಯಲ್ಲಿ SDPI ಬೆಂಬಲಿತ ಅಭ್ಯರ್ಥಿ ಸಬಿತಾ ಡಿಸೋಜಾ 9 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮೂರು ಮತಗಳು ಬಂದಿವೆ. ಮೂವರು ಬಿಜೆಪಿ ಬೆಂಬಲಿತ ಸದಸ್ಯರು ಚುನಾವಣೆಯಲ್ಲಿ ಗೈರುಹಾಜರಾಗಿದ್ದರು.


2015ರಿಂದ ಸತತವಾಗಿ ಸಜಿಪ ಗ್ರಾಮ ಪಂಚಾಯತ್’ನಲ್ಲಿ SDPI ಅಧಿಕಾರ ನಡೆಸುತ್ತಿದ್ದು, ಈ ಅವಧಿಯಲ್ಲಿ ಗಾಂಧಿ ಪುರಸ್ಕಾರ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವಾರು ಪ್ರಶಸ್ತಿಗಳನ್ನು ಸಜಿಪನಡು ಗ್ರಾಮ ಪಂಚಾಯತ್ ಪಡೆದುಕೊಂಡಿದೆ.

Join Whatsapp