ಸಿಕ್ಸ್ ಪ್ಯಾಕ್ ಮಾಡಲು ಹೋಗಿ ಆರು ಲಕ್ಷ ಕಳೆದುಕೊಂಡ ಬೆಂಗಳೂರಿನ ಯುವಕ

Prasthutha: June 29, 2021

ಬೆಂಗಳೂರು : ಸಿನಿಮಾ ನಾಯಕ‌ ನಟರಂತೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಹೋದ ಯುವಕನೊಬ್ಬನಿಂದ ಜಿಮ್ ತರಬೇತುದಾರ ( ಟ್ರೈನರ್) ಲಕ್ಷಾಂತರ ಹಣ ಪಡೆದು ವಂಚನೆ ಮಾಡಿರುವ ಸಂಬಂಧ ‌ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಜಿಮ್ ಟ್ರೈನರ್ ಮಾತು ನಂಬಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಹೋಗಿ ಸುಮಾರು 6 ಲಕ್ಷ ರೂ. ಹಣವನ್ನು ಕಳೆದುಕೊಂಡ ಯುವಕ ನೀಡಿರುವ ದೂರು ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಹಣ ಕಳೆದು ಕೊಂಡ ಹೊಸಕೆರೆಹಳ್ಳಿಯ ಯುವಕ ಕೌಶಿಕ್, ಜಿಮ್ ಟ್ರೈನರ್ ಮೋಹನ್ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಪ್ರಕರಣ ದಾಖಲಾಗುತ್ತಿದ್ದಂತೆ ಜಿಮ್ ಟ್ರೈನರ್ ಮೋಹನ್ ಪರಾರಿಯಾಗಿದ್ದಾನೆ. ಮೋಹನ್ ಬನಶಂಕರಿಯಲ್ಲಿ ಎಂಪವರ್ ಹೆಸರಿನಲ್ಲಿ ಜಿಮ್ ನಡೆಸುತ್ತಿದ್ದ. ಜಿಮ್ಗೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಕೌಶಿಕ್ ಹೋಗಿದ್ದ. ಕೆಲವು ಫೋಟೋಗಳನ್ನು ತೋರಿಸಿ ಮೂರೇ ತಿಂಗಳಲ್ಲಿ ಸಿಕ್ ಪ್ಯಾಕ್ ಮಾಡುವುದಾಗಿ ಮೋಹನ್ ನಂಬಿಸಿದ್ದ.

ಟ್ರೈನಿ ಮೋಹನ್ ಯುವಕನಿಂದ ಆರಂಭದಲ್ಲಿ 2 ಲಕ್ಷ ರೂ ನಂತರ 5 ಲಕ್ಷ ಸಾಲ ಕೊಡಿಸುವಂತೆ ಕೌಶಿಕ್ ಬಳಿ ಕೇಳಿದ್ದ. ಮೋಹನ್ ಮಾತು ಕೇಳಿ ಕೌಶಿಕ್ ಸಾಲ ಕೊಡಿಸಿದ್ದ. ಕೌಶಿಕ್ ತನ್ನ ಹೆಸರಿನಲ್ಲೇ ಮೋಹನ್ ಗೆ ಸಾಲ ಕೊಡಿಸಿದ್ದನು. ನಂತರ ಸಿಕ್ಸ್ ಪ್ಯಾಕ್ ಮಾಡಿಸದೇ, ಸಾಲದ ಇಎಂಐ ಕಟ್ಟದೇ ಕೌಶಿಕ್ಗೆ ಜಿಮ್ ಟ್ರೈನರ್ ಮೋಹನ್ ಅವಾಜ್ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಿರಿನಗರ ಪೊಲೀಸರು ಮುಂದಿನ‌ ತನಿಖೆಯನ್ನು ಕೈಗೊಂಡಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ