ಡ್ರಗ್ಸ್ ದಂಧೆ| ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ ಮಂಗಳೂರು ಪೊಲೀಸ್

Prasthutha|

ಮಂಗಳೂರು: ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತ ನೈಜೀರಿಯಾ ಪ್ರಜೆಗಳನ್ನು ಪೌಲ್ ಒಹಮೋಬಿ ಮತ್ತು ಉಚೆಚುಕು ಮಲಾಕಿ ಎಲಕ್ವಾಚಿ ಎಂದು ಗುರುತಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.‌ಶಶಿಕುಮಾರ್, ಜೂ.3ರಂದು ಮನಾಫ್, ಮುಝಮ್ಮಿಲ್, ಅಹಮ್ಮದ್ ಮಸೂಕ್ ಎಂಬವರನ್ನು ವಶಕ್ಕೆ ಪಡೆದು 170 ಗ್ರಾಂ MDMM ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು. ಜೂ.13ರಂದು ಉಪ್ಪಳ ಮೂಲದ ಶಫೀಕ್ ಕೆ.ಎಸ್. ಮತ್ತು ಅಲ್ತಾಫ್ ರನ್ನು ವಶಕ್ಕೆ ಪಡೆದು 65 ಗ್ರಾಂ MDMM ಡ್ರಗ್ಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಮೂಲದ ಸ್ಟ್ಯಾನ್ಲಿ ಚಿಮಾ ಮತ್ತು ಉಪ್ಪಳದ ರಮೀಝ್ ಬಗ್ಗೆ ಮಾಹಿತಿ ನೀಡಿದ್ದು ಅವರನ್ನು ಬಂಧಿಸಲಾಗಿತ್ತು.

- Advertisement -

ಸ್ಟ್ಯಾನ್ಲಿ ಮತ್ತು ರಮೀಜ್ ನನ್ನು ವಿಚಾರಣೆ ಮಾಡಿದಾಗ ಬೆಂಗಳೂರಿನಲ್ಲಿರುವ ನೈಜೀರಿಯಾ ಮೂಲದ ಪೌಲ್ ಒಹಮೋಬಿ ಮತ್ತು ಉಚೆಚುಕು ಮಲಾಕಿ ಎಲಕ್ವಾಚಿ ರಿಂದ ಡ್ರಗ್ಸ್ ಖರೀದಿಸಿದ್ದಾಗಿ ಹೇಳಿದ್ದಾರೆ. ಹೀಗಾಗಿ ಬೆಂಗಳೂರಿಗೆ ತೆರಳಿದ ಮಂಗಳೂರು ಪೊಲೀಸರು ಬೆಂಗಳೂರಿನ ಬಿದರಹಳ್ಳಿಯಲ್ಲಿ ಈ ಇಬ್ಬರನ್ನು ಬಂಧಿಸಿದ್ದಾರೆ ಎಂದು ಆಯುಕ್ತರು ಹೇಳಿದ್ದಾರೆ.

Join Whatsapp